Monday, December 2, 2024
Google search engine

Homeಕಾಡು-ಮೇಡುಬಿಆರ್‌ಟಿ: ನಾಲ್ಕು ದಿನದಲ್ಲಿ ೩ ಆನೆಗಳ ಕಳೇಬರ ಪತ್ತೆ

ಬಿಆರ್‌ಟಿ: ನಾಲ್ಕು ದಿನದಲ್ಲಿ ೩ ಆನೆಗಳ ಕಳೇಬರ ಪತ್ತೆ

ಚಾಮರಾಜನಗರ : ಹನೂರು ತಾಲ್ಲೂಕು ಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆಯಾಗಿದ್ದು, ಒಂದು ವಾರದ ಅವಧಿಯಲ್ಲಿ ಮೂರು ಆನೆಗಳು ಸಾವಿಗೀಡಾಗಿವೆ.

ಬೈಲೂರು ಮತ್ತು ಯಳಂದೂರು ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಎರಡು ಆನೆಗಳ ಮೃತದೇಹಗಳು ಪತ್ತೆಯಾಗಿದ್ದವು. ಅರಣ್ಯ ಸಿಬ್ಬಂದಿ ಗಸ್ತು ಕಾರ್ಯಾಚರಣೆ ಚುರುಕುಗೊಳಿಸಿದಾಗ, ಮುಳ್ಳಿನ ಪೊದೆಯೊಳಗೆ ೬೦ ರಿಂದ ೬೫ ವರ್ಷ ವಯಸ್ಸಿನ ಹೆಣ್ಣಾನೆಯ ಕಳೇಬರ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆನೆಯ ಶವಪರೀಕ್ಷೆ ನಡೆಸಲಾಗಿದ್ದು, ಏಳೆಂಟು ದಿನಗಳ ಹಿಂದೆ ಸ್ವಾಭಾವಿಕವಾಗಿ ಸಾವನ್ನಪ್ಪಿದೆ. ಈ ಮುಂಚೆ ಎರಡು ಆನೆಗಳೂ ಸ್ವಾಭಾವಿಕವಾಗಿ ಪ್ರಕಟವಾಗಿವೆ’ ಎಂದು ಪಶುವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

ವಾರದಲ್ಲಿ ಮೂರು ಆನೆಗಳ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆಯೇ ಅಥವಾ ಆನೆಗಳಿಗೆ ವಿಷ ಇಕ್ಕಲಾಗುತ್ತಿದೆಯೇ’ ಎಂಬ ಅನುಮಾನಗಳು ವ್ಯಕ್ತವಾಗಿವೆ.

RELATED ARTICLES
- Advertisment -
Google search engine

Most Popular