ಮೈಸೂರು : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂದು ಮಂಡಿಸಿದ ಬಜೆಟ್ ನಿರಾಶದಾಯಕವಾಗಿದ್ದು, ತುಟಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಕೃಷಿ ಕ್ಷೇತ್ರ ಮೊದಲನೇ ಆಧ್ಯತೆ ಎಂದು ಹೇಳುತ್ತಾ ಕೃಷಿಯನ್ನು ಮೊದಲು ಮುಗಿಸಲು ಹೊರಟಿದೆ ಈ ಸರ್ಕಾರ. ಸಣ್ಣ ಕೈಗಾರಿಕೆಗಳು ೨ನೇ ಅಧ್ಯತೆ ಎಂದು ಹೇಳಿ ಆ ಕ್ಷೇತ್ರವನ್ನು ಸಂಪೂರ್ಣವಾಗಿ ಮುಚ್ಚುತ್ತಿದೆ. ೩೮೪ ದಿನಗಳ ಕಾಲ ನಡೆದ ಐತಿಹಾಸಿಕ ರೈತ ಆಂದೋಲನದ ಸಮಯದಲ್ಲಿ ಕೇಂದ್ರ ಸರ್ಕಾರ ಅಣೆಯ ರೂಪದಲ್ಲಿ ನೀಡಿದ್ದ ಭರವಸೆಯ ಬಗ್ಗೆ ತುಟಿ ಬಿಚ್ಚಿಲ್ಲ, ರೈತರ ಸಾಲ ಮನ್ನಾ ಬಗ್ಗೆ ಏನು ಹೇಳಲ್ಲ, ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳ ತಡೆಗಟ್ಟಲು ಯಾವುದೇ ಕಾನೂನು ಪ್ರಸ್ತಾವನೆ ಇಲ್ಲ ಎಂದು ಅವರು ಕೇಂದ್ರದಬಜೆಟ್ ಅನ್ನು ಟೀಕಸಿದ್ದಾರೆ.
ಭದ್ರ ಮೇಲ್ದಂಡೆ ಯೋಜನೆಗೆ ೨೦೨೩ರ ಬಜೆಟ್ ಇದೆ ಮೋದಿ ಸರ್ಕಾರವು ೫೩೦೦ ಕೋಟಿ ನೀಡುವುದಾಗಿ ಘೋಷಿಸಿ ಇದುವರೆಗೂ ಒಂದು ನಯಾ ಪೈಸೆಯನ್ನು ಸಹ ನೀಡಿಲ್ಲ, ಈ ಬಟ್ಟೆಟ್ ನಲ್ಲಿ ಇದರ ಬಗ್ಗೆ ಪ್ರಸ್ತಾಪವೇ ಇಲ್ಲ. ಒಟ್ಟಾರೆ ಈ ಬಡ್ಡೆಟ್ ಕೃಷಿಕರ ಪರವಲ್ಲದ ಬಜೆಟ್ ಎಂದು ಅವರು ಹೇಳಿದ್ದಾರೆ.