ಹೊಸೂರು: ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣದಿಂದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎಂದು ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡ ಸ್ವಾಮೇಗೌಡ ಅಭಿಪ್ರಾಯಪಟ್ಟರು
ಸಾಲಿಗ್ರಾಮ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಮಹದೇವಮ್ಮ ದಶರಥ ಕುಟುಂಬದವರು 7 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಕನ್ನಂಬಾಡಮ್ಮ ದೇವಿಯ ದೇವಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ ಇದ್ದವರು ಗ್ರಾಮದ ಒಳಿತಿಗೆ ಶ್ರಮಿಸುವ ಕೆಲಸವನ್ನು ಮಾಡುವುದಿಲ್ಲ ಮಾಡುವರಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಇದರಿಂದ ಗ್ರಾಮಗಳು ದಾರ್ಮಿಕವಾಗಿ ಅಭಿವೃದ್ದಿ ಹೊಂದಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೇವಾಲಯ ನಿರ್ಮಾಣ ಮಾಡಿದ ಮಹದೇಮ್ಮ ಮತ್ತು ದಶರಥ ಅವರನ್ನು ದೊಡ್ಡಸ್ವಾಮೇಗೌಡ ಅವರು ಗ್ರಾಮಸ್ಥರ ಪರವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ದೊಡ್ಡಕೊಪ್ಪಲು ಡೈರಿ ಮಾಜಿ ಅಧ್ಯಕ್ಷ ಡಿ.ಎನ್.ಅಪ್ಪಾಜಿ, ಗ್ರಾ.ಪಂ.ಸದಸ್ಯ ಡಿ.ಎಂ.ವಿನಯ್ ಕುಮಾರ್, ನಿವೃತ್ತ ಶಿಕ್ಷಕ ಪರುಶುರಾಮ್, ಕಾಂಗ್ರೆಸ್ ಮುಖಂಡರಾದ ಸಿ.ಎಚ್.ನವೀನ್,ಸಿ.ಎಸ್.ಗಿರೀಶ್,ಲೋಕೇಶ್,ಅರುಣ್ ಕಲ್ಲಹಟ್ಟಿ , ಅಮೀತ್
ಮುಖಂಡರರಾದ ಚಿದನಂದ್, ಅಪ್ಪಾಜಿ, ದ್ರುವಕುಮಾರ್, ಶಶಿಧರ್, ರಾಮೇಗೌಡ, ರೇಖಾ ಮಹದೇವ್, ಡಿ.ಕೆ.ಮಹದೇವ, ನೇತ್ರಾಧಿಕಾರಿ ಕೆ.ಎಸ್.ಶೇಖರ್, ಅರ್ಚಕ ಚಂದ್ರೇಗೌಡ ಇದ್ದರು.