ಚಾಮರಾಜನಗರ: ಭಾರತ ಎಂಬ ಭಾವನೆಯಿಂದ ಭಾರತೀಯರಾಗೋಣ. ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಯ ಮೂಲಕ ರಾಷ್ಟ್ರವನ್ನು ಅಭಿವೃದ್ಧಿಯತ್ತ ಸಾಗಿಸುವ ಮೂಲಕ ವಿಶ್ವ ರಾಷ್ಟ್ರವಾಗಿ ಬೆಳೆಸಿ ಅಖಂಡ ಭಾರತದ ನಿರ್ಮಾಣವೇ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಚಿಂತನೆಯಾಗಿತ್ತು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯೂತ್ ಕ್ಲಬ್, ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ನಗರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನದಲ್ಲಿ ಮಾತನಾಡಿದರು.
ದೂರದೃಷ್ಟಿ ಹಾಗೂ ಚಾಣಾಕ್ಷತೆಯ ಹಾಗೂ ಬದ್ಧತೆಯ ಕಾರ್ಯ ಮಾಡಿ ನೂರಾರು ಸಂಸ್ಥಾನಗಳನ್ನು ಒಂದುಗೂಡಿಸಿ ಭಾರತದ ನಿರ್ಮಾಣವನ್ನು ಮಾಡಿದ ಮಹಾನ್ ವ್ಯಕ್ತಿ. ಭಾರತದ ಅಪೂರ್ವ ಸಾಧಕರು ಸರ್ದಾರ್ ಪಟೇಲ್. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇಡೀ ಭಾರತೀಯ ನೆಲೆಯನ್ನು ಒಂದುಗೂಡಿಸಿ, ವಿರೋಧಿಸಿದವರಿಗೆ ಕಠಿಣ ಕಾರ್ಯಾಚರಣೆಯ ಮೂಲಕ ನಿರ್ಮಾಣ ಮಾಡಿದ ಮಹಾನ್ ಆಡಳಿತಗಾರರು. ಅವರ ಜನ್ಮದಿನವನ್ನು ಭಾರತೀಯ ಏಕತಾ ದಿನವಾಗಿ ರಾಷ್ಟ್ರೀಯ ಭಾವೈಕ್ಯತೆ ಸಮಗ್ರತೆ ಮೂಲಕ ಭಾರತೀಯರಲ್ಲಿ ದೇಶಪ್ರೇಮವನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಆಡಳಿತ ಚಿಂತನೆ ರಾಷ್ಟ್ರ ನಿರ್ಮಾಣದ ಕಾರ್ಯ ಇಡೀ ಯುವಕರಿಗೆ ಆದರ್ಶ ಪ್ರಾಯವಾಗಿದೆ. ಎಂದರು.
ಪ್ರತಿ ಜಿಲ್ಲಾ ಕೇಂದ್ರದಲ್ಲೂ ಏಕತಾ ಕೇಂದ್ರಗಳನ್ನು ಹಾಗೂ ಸರ್ದಾರ್ ಪಟೇಲ್ ರವರ ಪ್ರತಿಮೆಯನ್ನು ನಿರ್ಮಾಣ ಮಾಡಿ ಭಾರತದ ಸಮಗ್ರ ವಿಕಾಸದ ಮಾರ್ಗವನ್ನು ಯುವಕರು , ವಿದ್ಯಾರ್ಥಿಗಳಲ್ಲಿ ರೂಪಿಸಬೇಕು ಎಂದು ತಿಳಿಸಿದರು.
ಇಂದು ದೆಹಲಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಸಂಘಟನೆ ಉದ್ಘಾಟನೆಗೊಳ್ಳುತ್ತಿರುವುದು ದೇಶದ ಹೆಮ್ಮೆಯ ದಿನವಾಗಿದೆ. ವಿಶ್ವದಲ್ಲಿ ಅಪಾರ ಯುವ ಸಮುದಾಯವನ್ನು ಹೊಂದಿರುವ ಭಾರತಕ್ಕೆ ಯುವಶಕ್ತಿಯ ಪರಿಪೂರ್ಣ ಶಕ್ತಿಯನ್ನು ರಾಷ್ಟ್ರಕವಿ ರೂಪಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ರಾಷ್ಟ್ರ ಭಾರತದ ವಿಶೇಷ ಸಂಸ್ಕೃತಿ ಪರಂಪರೆ ರಾಷ್ಟ್ರೀಯ ಹೆಮ್ಮೆಯನ್ನು ಯುವಕರಲ್ಲಿ ಬೆಳೆಸಿ ಮಾನಸಿಕವಾಗಿ ಸಿದ್ಧಗೊಳಿಸಬೇಕು ಎಂದು ತಿಳಿಸಿದರು.
ಸಮಾಜ ಸೇವಕರಾದ ಸುರೇಶ್ ಗೌಡರವರು ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಪ್ರತಿಮೆಗೆ ಪುಷ್ಪ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಂದೇ ಮಾತರಂ ,ಭಾರತ್ ಮಾತಾ ಕಿ ಜೈ ,ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರವರಿಗೆ ಜೈಕಾರವನ್ನು ಹಾಕಿ ಸ್ಪೂರ್ತಿಯನ್ನು ತುಂಬಲಾಯಿತು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಬಿಕೆ ಆರಾಧ್ಯ ಮಾದಾಪುರ ರೇವಣ್ಣ ,ಮಹದೇವು ಮತ್ತು ಯುವಕರು ಪಾಲ್ಗೊಂಡಿದ್ದರು.