Wednesday, April 9, 2025
Google search engine

Homeರಾಜಕೀಯಬಿಜೆಪಿ-ಜೆಡಿಎಸ್‌‍ ಕಿಡಿಗೇಡಿಗಳ ಕೃತ್ಯ ತಪ್ಪಿಸಲು ರಾಜ್ಯಪಾಲರಿಗೆ ಬುಲೆಟ್‌ಪ್ರೂಫ್‌ ಕಾರು : ಡಿಕೆಶಿ

ಬಿಜೆಪಿ-ಜೆಡಿಎಸ್‌‍ ಕಿಡಿಗೇಡಿಗಳ ಕೃತ್ಯ ತಪ್ಪಿಸಲು ರಾಜ್ಯಪಾಲರಿಗೆ ಬುಲೆಟ್‌ಪ್ರೂಫ್‌ ಕಾರು : ಡಿಕೆಶಿ

ಬೆಂಗಳೂರು: ರಾಜ್ಯಪಾಲರ ಕಾರಿಗೆ ಬಿಜೆಪಿ-ಜೆಡಿಎಸ್‌‍ನ ಕಿಡಿಗೇಡಿಗಳೇ ಕಲ್ಲು ಹೊಡೆದು ನಮ್ಮ ಮೇಲೆ ಆರೋಪ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಬುಲೆಟ್‌ಪ್ರೂಫ್‌ ಕಾರು ಒದಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌‍ನವರು ರಾಜ್ಯಪಾಲರನ್ನು ಬಳಸಿಕೊಂಡು ಕಾಂಗ್ರೆಸ್‌‍ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸುತ್ತಿದ್ದಾರೆ. ಜೊತೆಗೆ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ನಮಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸೂಕ್ತ ರಕ್ಷಣೆ ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಯಾರನ್ನು ಬೇಕಾದರೂ ಟೀಕಿಸುವ ಅವಕಾಶವಿದೆ. ಘನತೆ ವೆತ್ತ ರಾಜ್ಯಪಾಲರಿಗೆ ಸೂಕ್ತ ಗೌರವ ನೀಡಲಾಗುತ್ತಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular