ಮೈಸೂರು: ನಗರದ ಕುಂಬಾರ ಕೊಪ್ಪಲಿನ ಕೆಂಪೇಗೌಡ ಯುವಕರ ಬಳಗದ ವತಿಯಿಂದ ಜ.೨೧ ಮತ್ತು ೨೨ ರಂದು ಬೆಳಗ್ಗೆ ೧೦ ರಿಂದ ರಾತ್ರಿ ೧೦.೩೦ರವರೆಗೆ ನಗರದ ಮರಟಿಕ್ಯಾತನಹಳ್ಳಿ ಬಳಿ ರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.
ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಳಗ ಈ ಸ್ಪರ್ಧೆ ಆಯೋಜಿಸಿದೆ. ಪ್ರಥಮ ಮತ್ತು ದ್ವಿತೀಯ ಬಹುಮಾನವಾಗಿ ಬೈಕ್, ತೃತೀಯ ಬಹುಮಾನವಾಗಿ ೩೦ ಸಾವಿರ ನಾಲ್ಕನೇ ಬಹುಮಾನವಾಗಿ ೨೦ ಸಾವಿರ ರೂ. ನೀಡಲಾಗುವುದು. ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.