ನವದೆಹಲಿ: ರಕ್ಷಾ ಬಂಧನ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡುತ್ತಿದೆ. ಆಗಸ್ಟ್ ೩೦ ರಿಂದ ೧೪ ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಕ್ಯಾಬಿನೆಟ್ ಸಿಲಿಂಡರ್ ಇಳಿಕೆಗೆ ಅನುಮತಿ ನೀಡಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಸಿಎನ್‌ಬಿಸಿಟಿ ವರದಿ ಪ್ರಕಾರ ಅಡುಗೆ ಅನಿಲ ಬೆಲೆಯಲ್ಲಿ ೨೦೦ ರೂಪಾಯಿ ಇಳಿಕೆಯಾಗಲಿದೆ ಎಂದಿದೆ.
ಸದ್ಯ ೧೪.೨ ಕೆಜಿ ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ ಕರ್ನಾಟಕದಲ್ಲಿ ೧,೧೦೫.೫೦ ರೂಪಾಯಿ ಇದ್ದರೆ, ದೆಹಲಿಯಲ್ಲಿ ೧೦೫೩, ಮುಂಬೈನಲ್ಲಿ ೧೦೫೨.೫೦ ರೂಪಾಯಿ, ಚೆನ್ನೈನಲ್ಲಿ ೧೦೭೯ ರೂಪಾಯಿ ದರವಿದೆ. ಈ ಬೆಲೆಯಲ್ಲಿ ೨೦೦ ರೂಪಾಯಿ ಕಡಿತಗೊಳ್ಳಲಿದೆ ಎಂದು ವರದಿಯಾಗಿದೆ. ಜುಲೈ ತಿಂಗಳಲ್ಲಿ ೫೦ ರೂಪಾಯಿ ಏರಿಕೆ ಕಂಡಿದ್ದರೆ, ಮೇ ತಿಂಗಳಲ್ಲಿ ೨ ಬಾರಿ ದರ ಏರಿಕೆಯಾಗಿತ್ತು.
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ. ೧೯ ಕೆಜಿ ವಾಣಿಜ್ಯ ಗ್ಯಾಸ್ ಬೆಲೆ ೯೯.೭೫ ರೂಪಾಯಿ ಇಳಿಕೆಯಾಗಲಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆ ಆಗಸ್ಟ್ ೧ ರಿಂದ ಇಳಿಕೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ವಾಣಿಜ್ ಸಿಲಿಂಡರ್ ಬೆಲೆ ೨೧೯೦.೫ ರೂಪಾಯಿ ಇದೆ. ಆಗಸ್ಟ್ ೧ ರಿಂದ ಈ ಬೆಲೆಯೂ ಪರಿಷ್ಕರಣೆಗೊಳ್ಳಲಿದೆ.