ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣದಿಂದ ಪ್ರವಾಹ ಪೀಡಿತ ವಯನಾಡಿಗೆ ಬಸ್ ಸಂಚಾರ ಗುರುವಾರ ರಾತ್ರಿಯಿಂದ ಆರಂಭವಾಗಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆಯ 5 ಬಸ್ಸುಗಳ ಸಂಚಾರ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಪ್ರತಿ ಗಂಟೆಗೆ ಒಂದು ಬಸ್ಸು ಹೊರಡುತ್ತಿದೆ. ಒಟ್ಟು 23 ಬಸ್ಸುಗಳು ಕಾರ್ಯಾಚರಣೆ ಮಾಡಲಿದೆ.
ಮೈಸೂರು-ಸುಲ್ತಾನ್ ಬತ್ತೇರಿ ಮಾರ್ಗ ಮತ್ತು ಮೈಸೂರು – ಮಾನಂದವಾಡಿ ಮಾರ್ಗದ ಮೂಲಕ ಬಸ್ಸುಗಳು ವಯನಾಡಿಗೆ ತೆರಳುತ್ತಿವೆ. ಇಂದು ಮತ್ತು ನಾಳೆ ಕಾರ್ಯಾಚರಣೆ ಮಾಡಲಿರುವ ಬಸ್ಸುಗಳ ಎಲ್ಲಾ ಸೀಟ್‌ಗಳು ಬುಕ್ ಆಗಿವೆ.