ವರದಿ: ಸ್ಟೀಫನ್ ಜೇಮ್ಸ್
ಬೆಳಗಾವಿ : ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಆಕರಿಸಿದ ಬಳಕೆದಾರಿಂದ ಸುಮಾರು 1.62 ಸಾವಿರ ರೂ. ಶುಲ್ಕ ಆಕರಿಸಲಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ( ಎಪಿಎಂಸಿ) ತಿಳಿಸಿದೆ.
ಜೈ ಕಿಸಾನ್ ಹೋಲ್ ಸೇಲ್ ವೆಜಿಟೆಬಲ್ ಮರ್ಚಂಟ್ಸ್ ಅಸೋಸಿಯೇಷನ್, ಬೆಳಗಾವಿ ಇವರಿಗೆ ನೀಡಿದ ಲೈಸನ್ನನ್ನು ರದ್ದುಪಡಿಸಿದ್ದರಿಂದ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ತಂದು ಮಾರಾಟ ಮಾಡಲು ಪ್ರಾರಂಭಿಸಿರುತ್ತಾರೆ. ಮುಂದುವರೆದು, ತರಕಾರಿ ವ್ಯಾಪಾರವು ಖಾಸಗಿ ಮಾರುಕಟ್ಟೆಯಿಂದ ಸಮಿತಿಯ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಗೊಂಡು ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಿ ಸಮಿತಿಗೆ ಬಳಕೆದಾರ ಶುಲ್ಕ ಪಾವತಿಸಿರುತ್ತಾರೆ. ಸೆ.16 ರಿಂದ ಸೆ.22ರವರೆಗೆ ವ್ಯವಹರಿಸಿದ ಬಗ್ಗೆ ರೂ.1,62,004/-ಗಳು ಬಳಕೆದಾರರ ಶುಲ್ಕ, ಆಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.