Saturday, April 19, 2025
Google search engine

HomeUncategorizedರಾಷ್ಟ್ರೀಯಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ನವದೆಹಲಿ: ಖ್ಯಾತ ಉದ್ಯಮಿ ರತನ್ ಟಾಟಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಸುದ್ದಿಯೊಂದು ಮೂಲಗಳಿಂದ ತಿಳಿದು ಬಂದಿದೆ.
ಆದರೆ ಈ ಸುದ್ದಿಯನ್ನು ಉದ್ಯಮಿ ರತನ್ ಟಾಟಾ ಅವರೇ ತಳ್ಳಿಹಾಕಿದ್ದಾರೆ.

ಉದ್ಯಮಿ ರತನ್ ಟಾಟಾ ಅವರಿಗೆ ಸದ್ಯ 86 ವರ್ಷ ವಯಸ್ಸು. ಮೂಲಗಳ ಪ್ರಕಾರ ಟಾಟಾ ಅವರು ನಿನ್ನೆ ತಡರಾತ್ರಿ 12.30ಕ್ಕೆ ಮುಂಬೈ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ರತನ್ ಟಾಟಾ ಅವರ ರಕ್ತದೊತ್ತಡ ತುಂಬಾನೇ ಕಡಿಮೆಯಾಗಿದೆ ICUನಲ್ಲಿ ರತನ್ ಟಾಟಾ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಡಾ. ಶಾರುಖ್ ಅಸ್ಪಿ ಗೋಲ್ವಾಲ್ಲಾ ಅವರು ರತನ್ ಟಾಟಾ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಯಾವುದೇ ತೊಂದರೆ ಇಲ್ಲ ಎನ್ನಲಾಗಿತ್ತು.

ರತನ್ ಟಾಟಾ ಅವರು ಆಸ್ಪತ್ರೆಗೆ ಹೋದ ವಿಚಾರ ಗೊತ್ತಾಗುತ್ತಿದ್ದಂತೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಕೂಡಾ ಹಬ್ಬಿತ್ತು. ಸದ್ಯ ರತನ್ ಟಾಟಾ ಅವರಿಗೆ ಏನು ಆಗಿಲ್ಲ ಎಂದು ಅವರೇ ಖುದ್ದು ಮಾಹಿತಿ ನೀಡಿದ್ದಾರೆ. ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿಯೇ ಸುಳ್ಳು ಎಂದಿದ್ದಾರೆ.

RELATED ARTICLES
- Advertisment -
Google search engine

Most Popular