ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಫೇಮಸ್ ಈ ಬೆಣ್ಣೆ ಸಂತೆ…… ನಾಗಮಂಗಲ ತಾಲೂಕಿನ ಬೆಂಡಿಗನವಿಲೆ ಗ್ರಾಮದಲ್ಲಿ ಪ್ರತಿ ಸೋಮವಾರ ಈ ಬೆಣ್ಣೆ ಸಂತೆ ನಡೆಯುತ್ತದೆ. ಈ ಸಂತೆಯಲ್ಲಿ ಮಾರುವ ಬೆಣ್ಣೆ ಖರೀದಿಸಲು ಗ್ರಾಹಕರು ಮುಗಿ ಬೀಳುತ್ತಾರೆ.
ಪರಿಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಬೆಂಡಿಗನವಿಲೆ ಯ ಈ ಬೆಣ್ಣೆ ಸಂತೆ, ಹೈನುಗಾರಿಕಾ ರೈತ ಮಹಿಳೆಯರ ಸ್ವಾಲಂಬಿ ಬದುಕಿಗೆ ಆಧಾರವಾಗಿದೆ .
ಇಲ್ಲಿ ಬೆಣ್ಣೆ ಖರೀದಿಸಲು ಪ್ರತಿ ಸೋಮವಾರ ಬೆಂಗಳೂರು- ತುಮಕೂರು ಸೇರಿದಂತೆ ಸುತ್ತಮುತ್ತಲ ಸ್ಥಳಗಳಿಂದ ಜನರು, ಉದ್ಯಮಿಗಳು ಆಗಮಿಸುತ್ತಿರುತ್ತಾರೆ.