ಬೆಳಗಾವಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಬಿವೈ ವಿಜಯೇಂದ್ರ ನಡುವಿನ ಬಡಿದಾಟ ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ರಾಜ್ಯಾಧ್ಯಕ್ಷ ನಾಯಕತ್ವವನ್ನು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಯತ್ನಾಳ್ ಅವರಿಗೆ ಬಿಜೆಪಿಯ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದು, ಹೈಕಮಾಂಡ್ಗೆ ಯಾವ ರೀತಿ ಉತ್ತರ ನೀಡಬೇಕು ನೀಡುತ್ತೇವೆ ಆದರೆ ಪಾಪ ವಿಜಯೇಂದ್ರ ಇನ್ನೂ ಸಣ್ಣ ಹುಡುಗ ಕೂಡಲೇ ಸ್ಥಾನವನ್ನು ಬಿಡಲಿ ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈ ಕಮಾಂಡ್ ಗೆ ಸಮರ್ಥವಾದ ಉತ್ತರ ಕೊಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಅವರು ಪಾಪ ಸಣ್ಣ ಹುಡುಗ ಅವನು ರಾಜ್ಯಾಧ್ಯಕ್ಷ ಸ್ಥಾನ ತ್ಯಾಗ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಅವನಿಗೆ ರಾಜಕಾರಣ ಗೊತ್ತಿಲ್ಲ. ಬಿ.ಎಸ್ ಯಡಿಯೂರಪ್ಪ ಹುಟ್ಟು ಹೋರಾಟಗಾರ ಅವರಿಗೆ ಎಲ್ಲವೂ ಗೊತ್ತಿದೆ. ಆದರೆ ವಿಜಯೇಂದ್ರ ಸಣ್ಣ ಹುಡುಗ ಮುಂದೆ ಭವಿಷ್ಯದಲ್ಲಿ ಅವರು ರಾಜ್ಯಾಧ್ಯಕ್ಷ ಆಗಲಿ ಎಂದು ಸಲಹೆ ನೀಡಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ನೋಟಿಸ್ ನೀಡಿದ ಬೆನ್ನಲ್ಲೆ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಸಭೆ ನಡೆಸಿದ್ದಾರೆ.ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಸಂತೋಷ ಸೇರಿದಂತೆ ಹಲವರು ಸಭೆ ನಡೆಸಿದ್ದಾರೆ. ಹಾಗಾಗಿ ಈ ಒಂದು ಬಿಜೆಪಿಯ ಬಣ ಬಡಿದಾಟ ಎಲ್ಲಿಯವರೆಗೆ ಹೋಗಿ ಮಟ್ಟುತ್ತೆ ಎನ್ನುವುದು ಕುತೂಹಲ ಮೂಡಿಸಿದೆ.