Thursday, January 29, 2026
Google search engine

Homeರಾಜ್ಯಸುದ್ದಿಜಾಲಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಧರ್ಮದರ್ಶಿಯಾಗಿ ಸಿ. ಅಪೂರ್ವಚಂದ್ರ ನೇಮಕ

ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಧರ್ಮದರ್ಶಿಯಾಗಿ ಸಿ. ಅಪೂರ್ವಚಂದ್ರ ನೇಮಕ

ಮದ್ದೂರು: ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ನ ಧರ್ಮದರ್ಶಿಯಾಗಿ ನಗರದ  ಎಂ. ಹೆಚ್. ಚನ್ನೆಗೌಡ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಿ. ಅಪೂರ್ವ ಚಂದ್ರ ಅವರನ್ನ ನೇಮಕ ಮಾಡಲಾಗಿದೆ.

ಕಳೆದ 30 ವರ್ಷಗಳಿಂದ ಎಂ. ಹೆಚ್. ಚನ್ನೆಗೌಡ ವಿದ್ಯಾ ಸಂಸ್ಥೆಯಲ್ಲಿ ಕೃಷಿಕ್ ಸರ್ವೋದಯ  ಶಾಖೆಯನ್ನು ಪ್ರಾರಂಭಿಸಿ ತಾಲೂಕಿನ ಯುವಕ-ಯುವತಿಯರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿರುವುದನ್ನು ಪರಿಗಣಿಸಿ ಮಂಡ್ಯ  ಕೃಷಿಕ್ ಸರ್ವೋದಯ ಟ್ರಸ್ಟ್ ನ 146ನೇ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ  ಟಿ. ತಿಮ್ಮೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಅಭಿನಂದನೆ:

ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ನ ಧರ್ಮದರ್ಶಿಯಾಗಿ ನೇಮಕಗೊಂಡಿರುವ ಸಿ. ಅಪೂರ್ವಚಂದ್ರ ಅವರನ್ನು ಎಂ. ಹೆಚ್. ಚನ್ನೇಗೌಡ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಸ್ವರೂಪ ಚಂದು, ಖಜಾಂಚಿ ಜಿ.ಎಸ್. ಶಿವರಾಂ, ನಿರ್ದೇಶಕರುಗಳು ಹಾಗೂ ಅಂಗ ಸಂಸ್ಥೆಯ ಮುಖ್ಯಸ್ಥರುಗಳು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular