ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ ನೂತನ ಅಧ್ಯಕ್ಷರಾಗಿ ಚಿಕ್ಕಭೇರ್ಯ ಗ್ರಾಮದ ಸಿ.ಸಿ.ಮಹದೇವ್ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಂಘದ ಸದಸ್ಯರುಗಳ ಸಭೆಯಲ್ಲಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಮಾದನಾಯಕ (ಸಾಲಿಗ್ರಾಮ), ಉಪಾಧ್ಯಕ್ಷರಾಗಿ ವೆಂಕಟೇಶ ನಾಯಕ (ದೇವಿತಂದ್ರೆ), ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ಮಂಜುನಾಥ್ (ಚಿಕ್ಕಕೊಪ್ಪಲು), ಸಹ ಕಾರ್ಯದರ್ಶಿಯಾಗಿ ಭೈರನಾಯಕ (ಶ್ಯಾಬಾಳು), ಖಜಾಂಚಿಯಾಗಿ ಸಂತೋಷ (ಹೊಸೂರು), ಸಂಘಟನಾ ಕಾರ್ಯದರ್ಶಿಯಾಗಿ ಕುಮಾರನಾಯಕ (ಚನ್ನoಗೆರೆ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆರ್.ಸಿ.ರಮೇಶನಾಯಕ (ರೊಪ್ಪ), ಕ್ರೀಡಾ ಕಾರ್ಯದರ್ಶಿಯಾಗಿಮಲ್ಲಿಕಾರ್ಜುನನಾಯಕ (ಚನ್ನoಗೆರೆ), ಸಲಹೆಗಾರರಾಗಿ ತಿಮ್ಮನಾಯಕ (ಹರದನಹಳ್ಳಿ), ಲಕ್ಷ್ಮಣನಾಯಕ (ಹನಸೋಗೆ ),ಸ್ವಾಮಿನಾಯಕ (ಶ್ಯಾಬಾಳು) ಅವರುಗಳು ಆಯ್ಕೆಯಾಗಿದ್ದಾರೆ.

ನಂತರ ನೂತನ ಅಧ್ಯಕ್ಷ ಸಿ.ಸಿ.ಮಹದೇವ್ ಮಾತನಾಡಿ ಸಂಘದ ಸರ್ವ ಸದಸ್ಯರುಗಳ ಸಹಕಾರ, ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಸಮುದಾಯದ ಸಂಘಟನೆಯನ್ನು ಗಟ್ಟಿಗೊಳಿಸುವುದರೊಂದಿಗೆ ಸಮಾಜದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸಮಾಜದ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸಿ ವಿವಿಧ ಇಲಾಖೆಗಳಿಂದ ದೊರೆಯುವ ಸವಲತ್ತುಗಳನ್ನು ಸಮಾಜದ ಅರ್ಹ ಪಲಾನುಭವಿಗಳಿಗೆ ಕೊಡಿಸುವಂತ ಕೆಲಸವನ್ನು ಮಾಡುವುದರ ಜೊತೆಗೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನದ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು. ಲೂಕು ಸಂಘವನ್ನು ಆರಂಭದ ದಿನಗಳಿಂದ ಇಂದಿನವರೆಗೂ ಕಟ್ಟಿ ಬೆಳೆಸಿಕೊಂಡು ಬಂದಂತಹ ಸಮಾಜದ ಎಲ್ಲಾ ಮುಖಂಡರುಗಳಿಗೂ ಹಾಗೂ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ ಸಮಾಜ ಎಲ್ಲಾ ಬಂಧುಗಳಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಭೆಯಲ್ಲಿ ಮುಖಂಡರುಗಳಾದ ರೊಪ್ಪ ಸುರೇಶ್, ಮುಂಜನಹಳ್ಳಿ ಮಹದೇವನಾಯಕ, ಡಾ.ಎಸ್.ಜೆ.ಗಣೇಶ್, ಕೆಇಬಿ ದೇವರಾಜು, ಗೋಬಿ ಶಂಕರ್, ಲೊಕೇಶನಾಯಕ, ಕೆ.ಪ್ರಕಾಶ್, ಫೈನಾನ್ಸ್ ಮಹದೇವನಾಯಕ, ಮಿರ್ಲೆ ವೆಂಕಟೇಶನಾಯಕ, ಹರೀಶ್ ನಾಯಕ, ಆರ್.ಪಿ.ರಮೇಶ್ ನಾಯಕ, ಕೃಷ್ಣನಾಯಕ, ಕುಬೇರ, ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.