ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಜಿದ್ದಾಜಿದ್ದಿನಿಂದ ನಡೆದ ಗ್ರಾಪಂ ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸಿ. ಕೃಷ್ಣಪ್ಪ ಆಯ್ಕೆಯಾದರು.
ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಪಂ ನಲ್ಲಿ ಹಿಂದಿನ ಉಪಾಧ್ಯಕ್ಷ ಸೋಮಶೇಖರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಸದಸ್ಯರಾದ ರವಿಕುಮಾರ್ ಧನಲಕ್ಷ್ಮಿ ಕೃಷ್ಣಪ್ಪ ನಾಮಪತ್ರ ಸಲ್ಲಿಸಿದರು ಅಂತಿಮವಾಗಿ ಮತದಾನ ನಡೆದು ಕೃಷ್ಣಪ್ಪ 7,ರವಿಕುಮಾರ 5 ಧನಲಕ್ಷ್ಮಿ 5 ಮತ ಪಡೆದು ಕೃಷ್ಣಪ್ಪ ಅವರ ಆಯ್ಕೆಯನ್ನು ಚುನಾವಣಾ ಅಧಿಕಾರಿಯಾಗಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ರವರು ಘೋಷಿಸಿದರು.
ಚುನಾವಣೆಯಲ್ಲಿ ಸದಸ್ಯರಾದ ಸವಿತಾಕುಚೇಲ, ರತ್ನಮಣಿ,ಚೈತ್ರ,ಅನಿತಾ ಮಣಿ,ಮಾದಯ್ಯ, ಸೋಮಶೇಖರ, ರಾಜೇಶ್ವರಿ,ಸುನೀತಾ,ಗಿರಿಜಾ,ಅಶ್ವತ್ ಕುಮಾರ, ಶೀಲಾ, ರಾಮಚಂದ್ರ ಸುನೀತಾದಿನೇಶ್ ಸೇರಿದಂತೆ ಎಲ್ಲಾ 17 ಸದಸ್ಯರು ಭಾಗವಹಿಸಿದ್ದರು.
ನೂತನ ಉಪಾಧ್ಯಕ್ಷ ಕೃಷ್ಣಪ್ಪ ಅವರನ್ನು ಗ್ರಾಮದ ಮುಖಂಡರಾದ ಗಂಗಾಧರ ಮಂಜುನಾಥ ಪ್ರಕಾಶ ಬೋರೇಗೌಡ ಕಾಂತರಾಜು ದಿನೇಶ ರಘುನಾಯಕ,ಹರೀಶ ಲಾರಿ ಮಂಜು,ಮಲ್ಲಿಕಾರ್ಜುನ,ತಮ್ಮೇಗೌಡ ಚಂದ್ರಶೇಖರ,ರಮೇಶ, ರಾಜೇಗೌಡ, ಅಭಿ ಕುಮಾರ್ ನಾಯಕ, ಲೋಕೇಶ ಮತ್ತಿತರು ಸೇರಿದಂತೆ ಅಭಿನಂದಿಸಿ ಸಿಹಿ ಹಂಚಿ ಸಂಭ್ರಮಿಸಿದರು.