ಚಾಮರಾಜನಗರ: ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ದೇಶಪ್ರೇಮವನ್ನು ಸಾರುವ ಕಾರ್ಯಕ್ರಮ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾಹಿತಿ ನೀಡಿದರು. ಇಂದು ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನೆಹರು ಯುವ ಕೇಂದ್ರ, ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಅಮೃತ ಕಳಸ ಯಾತ್ರೆ ಕಾರ್ಯಕ್ರಮದಡಿ ಅಮೃತ ಕಳಸ ಯಾತ್ರೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನನ್ನ ಮಣ್ಣು ನನ್ನ ನಾಡು ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿಯೊಂದು ಹಳ್ಳಿ ಮೂಲೆಯಿಂದ ಸುಮಾರು ೨ ರಿಂದ ೨.೫ ಕಿ. ಜಿಲ್ಲೆಯಿಂದ ಅಷ್ಟೂ ಮಣ್ಣನ್ನು ಸಂಗ್ರಹಿಸಿ ರಾಜ್ಯ ಹಾಗೂ ದೆಹಲಿಗೆ ಕಳುಹಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಇದು ದೇಶದ ಪ್ರಯೋಜನ ಮತ್ತು ಸೇವೆಯನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಹೀಗಾಗಿ ಇಂತಹ ಕಾರ್ಯಕ್ರಮಗಳಿಂದ ದೇಶಭಕ್ತಿ ಬೆಳಗುತ್ತದೆ ಎಂದರು. ದೇಶದ ಮೂಲೆ ಮೂಲೆಯಿಂದ ಮಣ್ಣನ್ನು ಸಂಗ್ರಹಿಸಿ ವಿವಿಧ ರೀತಿಯ ಗಿಡಗಳನ್ನು ಬೆಳೆಸುವ ವಿಶಿಷ್ಟ ಉದ್ದೇಶ ಹೊಂದಿರುವ ಕಾರ್ಯಕ್ರಮ. ನನ್ನ ಮಣ್ಣು ನನ್ನ ದೇಶ ಎಂಬ ಅಭಿಯಾನ ಯಶಸ್ವಿಯಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಭಾಗ್ಯ ನಮ್ಮೆಲ್ಲರದ್ದು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕಿರಣ ಪಟ್ನೇಕರ ಮಾತನಾಡಿ, ನನ್ನ ಮಣ್ಣು ನನ್ನ ದೇಶ ಎಂಬ ಅಭಿಯಾನ ಭಾರತ ಸರ್ಕಾರದ ಹೆಮ್ಮೆಯ ಕಾರ್ಯಕ್ರಮ. ಪ್ರತಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳನ್ನು ರಾಜ್ಯ ಮಟ್ಟ ಮತ್ತು ಕೇಂದ್ರ ಸ್ಥಾನಕ್ಕೆ ಕಳುಹಿಸುವ ವಿಶಿಷ್ಟ ಕಾರ್ಯ ಇದಾಗಿದೆ. ದೇಶದ ಸಂಸ್ಕೃತಿ ಏಕತೆಯನ್ನು ಹರಡುವ ವಿನೂತನ ಅಭಿಯಾನವಾಗಿದೆ.
ನಂತರ ನಗರದ ತಾಲೂಕು ಪಂಚಾಯಿತಿ ಕಚೇರಿಯಿಂದ ಆರಂಭವಾದ ಕಳಸಾ ಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ತಾಲೂಕು ಕಚೇರಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಅಮೃತ ಕಲಶ ಹೊತ್ತು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ನೆಹರು ಯುವ ಕೇಂದ್ರದ ಪದಾಧಿಕಾರಿಗಳಿಗೆ ಅಮೃತ ಕಲಶ ನೀಡುವ ಮೂಲಕ ಸಮಾರೋಪಗೊಂಡರು. ಚಾಮರಾಜನಗರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಕಾಶಕುಮಾರ, ನೆಹರು ಯುವ ಕೇಂದ್ರ ಅಧಿಕಾರಿ ಅಭಿಯೇಕ ಚವರೆ, ಎಸ್.ಬಿ.ಎಂ.ಮಹಾದೇವ ಇತರರು ಭಾಗವಹಿಸಿದ್ದರು.