ಚಾಮರಾಜನಗರ: ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ ನೂತನವಾಗಿ ನಿರ್ಮಿಸುತ್ತಿರುವ ಸುವರ್ಣ ಕರ್ನಾಟಕ ಉದ್ಯಾನವನ ಉದ್ಘಾಟನೆಯನ್ನು ಚಾಮರಾಜನಗರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂ ಎಸ್ ಐ ಎಲ್ ಅಧ್ಯಕ್ಷರಾದ ಶ್ರೀಸಿ .ಪುಟ್ಟರಂಗಶೆಟ್ಟಿ ರವರು ನೆರವೇರಿಸಿದರು.
ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ,ಉಪನ್ಯಾಸಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾಲೇಜು ವಾತಾವರಣವನ್ನು ಉತ್ತಮಗೊಳಿಸಲು ಹಾಗೂ ಪರಿಸರ ಜಾಗೃತಿ ಉಂಟು ಮಾಡಿ ,ಮಕ್ಕಳಲ್ಲಿ ಗಿಡಗಳ ನೆಡುವಿಕೆ ಮತ್ತು ಪ್ರಕೃತಿಯ ಆರಾಧಿಸುವಿಕೆಗಾಗಿ 160 ಗಿಡಗಳನ್ನು ನೆಟ್ಟು ಸುಂದರವಾದ ಉದ್ಯಾನವನವನ್ನು ನಿರ್ಮಿಸಲು ಪ್ರಯತ್ನ ಮಾಡಲಾಗಿದೆ. ಸುವರ್ಣ ಕರ್ನಾಟಕ ಉದ್ಯಾನವನವನ್ನು ಉದ್ಘಾಟಿಸುವ ಮೂಲಕ ಸಂತೋಷವ್ಯಕ್ತಪಡಿಸಿದರು .ಸುವರ್ಣ ಕರ್ನಾಟಕ ಉದ್ಯಾನವನ ಸುಸಜ್ಜಿತವಾಗಿ ನಿರ್ಮಿಸಲು ಮೂರು ಲಕ್ಷ ಅನುದಾನವನ್ನು ನೀಡುವುದಾಗಿ ಘೋಷಿಸಿದರು. ಉತ್ತಮ ಶಿಕ್ಷಣ ಹಾಗೂ ಉತ್ತಮ ವಾತಾವರಣ ನಿರ್ಮಿಸುವುದು ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಉತ್ತಮಪಡಿಸಿಕೊಂಡು ಪದವಿ, ಸ್ನಾತಕೋತ್ತರ ಪತ್ರಿಕೆಗಳನ್ನು ಪಡೆಯಬೇಕು . ಪ್ರತಿಯೊಬ್ಬರೂ ಶಿಕ್ಷಣದಿಂದ ಜಾಗೃತಿ ಪಡೆದು ಉನ್ನತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕರ್ನಾಟಕ ಸುವರ್ಣ ಸಂಭ್ರಮದ ನೆಲೆಗಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಹಾಗೂ ಸಾರ್ವಜನಿಕ ಸಹಕಾರದೊಂದಿಗೆ ಉದ್ಯಾನವನವನ್ನು ನಿರ್ಮಿಸಲಾಗಿದ್ದು, ಸುವರ್ಣ ಕರ್ನಾಟಕ ಉದ್ಯಾನವನ ಎಂದು ಹೆಸರಿಡಲಾಗಿದೆ. ಒಂದು ಮಾದರಿ ಉದ್ಯಾನವನವಾಗಿ ನಿರ್ಮಿತವಾಗಲು ಸರ್ವರ ಸಹಕಾರ ಅಗತ್ಯವೆಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪನವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತೇಜಸ್ವಿನಿ ,ಕ್ಷೇತ್ರ ಶಿಕ್ಷಣಾಧಿಕಾರಿ ಹನಮಶೆಟ್ಟಿ , ಪ್ರೌಢಶಾಲಾ ಪ್ರಭಾರಿ ಮುಖ್ಯ ಶಿಕ್ಷಕಿ ಪಿ ಟಿ ಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಉಪನ್ಯಾಸಕರಾದ ಮೂರ್ತಿ, ಶಿವ ಸ್ವಾಮಿ ,ಬಸವಣ್ಣ, ಸುರೇಶ್ ದೊಡ್ಡ ಮೊಳೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.