ವರದಿ. ಎಡತೊರೆ ಮಹೇಶ್
H.D.ಕೋಟೆ : ಯುವಕರು ಸಂಘಟಿತರಾದರೆ ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಕೋಡನಹಳ್ಳಿ ಹಳ್ಳಿ ಜಗದೀಶ್ ಹೇಳಿದ್ದಾರೆ
ಪಟ್ಟಣದ ಡಿಎಂಸಿ ಫಾರಮ್ ಹೌಸ್ ನಲ್ಲಿ ನಡೆದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತಾಡಿದ ಅವರು ಪ್ರತಿಯೊಂದು ಸಮಾಜದ ಯುವಕರು ಉತ್ತಮ ಬೆಳವಣಿಗೆಯಿಂದ ಸಂಘಟಿತರಾಗಿ ಕೆಲಸ ನಿರ್ವಹಿಸಿದಾಗ ಸಮಾಜದ ಅಭಿವೃದ್ಧಿ ಮತ್ತು ಯುವ ಸಂಘಟನೆ ಬಲಿಷ್ಠವಾಗಲಿದೆ.
ಟೌನ್ ಯುವ ಒಕ್ಕಲಿಗರ ಹಿತರಕ್ಷಣ ಸಮಿತಿಯು ಪ್ರತಿಸಾಲಿನಲ್ಲೂ ಅನೇಕ ವಿವಿಧ ಕಾರ್ಯಕ್ರಮಗಳು ಸೇವಾ ಮನೋಭಾವದಿಂದ ಎಲ್ಲರೂ ಒಗ್ಗಟ್ಟಿನಿಂದ ನೆರವೇರಿಸುತ್ತಿದ್ದಾರೆ ಇದು ಇತರರಿಗೆ ಸ್ಪೂರ್ತಿಯಾಗಿದೆ.

ಸಂಘದ ಅಧ್ಯಕ್ಷರಾದ ಅಂಗಡಿ ಸತೀಶ್ ಅಧ್ಯಕ್ಷತೆ ವಹಿಸಿದರು ಇದೇ ಸಂದರ್ಭದಲ್ಲಿ ಉದ್ಯಮಿ ಸಂತೋಷ್ ಗೌಡ ಪ್ರಧಾನ ಕಾರ್ಯದರ್ಶಿ ಮೀನ್ ರಾಜಣ್ಣ ಖಜಾಂಚಿ ಕಾಳರಾಜ್ ಗೌರವಾಧ್ಯಕ್ಷ ವೀರೇಂದ್ರ ಕುಮಾರ್ ಉಪಾಧ್ಯಕ್ಷರಾದ ಮಂಜು ಕೋಟೆ ಡಿಸಿ ಸ್ವಾಮಿ ಸಂಘಟನಾ ಕಾರ್ಯದರ್ಶಿ ಜಯರಾಮ್ ಪ್ರಾಂಶುಪಾಲರಾದ ಬೈರೇಗೌಡ ಪತ್ರಕರ್ತ ಎಡತೊರೆ ಮಹೇಶ್ ಪ್ರಗತಿಪರ ರೈತ ಶಶಿಧರ್ ರಾಮಚಂದ್ರ ಸಿರಿ ಶ್ರೀಧರ ಚಂದ್ರು ಮಾರುತಿ ರವಿ ಹೆಚ್ಎಂ ಪ್ರೇಮ್ ಕುಮಾರ್ ಪ್ರಾಂಶುಪಾಲರಾದ ರಾಜೇಂದ್ರ ಡಿ ಗೌಡ ಸೋಲಾರ್ ಪ್ರದೀಪ್ ಜಿಮ್ ಯಶವಂತ್ ವಕೀಲರಾದ ಮಾದೇವ ಪ್ರಸಾದ್ ಕೋರ್ಟ್ ಯಶ್ವಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




