ರಾಮನಗರ: ಸರ್ಕಾರವು ಕ್ರೀಡಾಪಟುಗಳಿಗೆಂದೇ ಹಲವು ಯೋಜನೆಗಳು ಹಾಗೂ ಸವಲತ್ತುಗಳನ್ನು ಒದಗಿಸಿದೆ ಅದನ್ನು ಸದುಪಯೋಗಪಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಕೊಂಡೊಯ್ಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಸತೀಶ್ ಕರೆ ನೀಡಿದರು.
ಅವರು ಸೆ. ೨೫ರ ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದರಾಮನಗರ ಜಿಲ್ಲಾ ಮಟ್ಟದ ೨೦೨೪-೨೫ರ ದಸರಾ ಸಿ.ಎಂ.ಕಪ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಆಟದಲ್ಲಿ ಗೆಲವು ಸೋಲು ಸಾಮಾನ್ಯ, ಭಾಗವಹಿಸುವಿಕೆ ಮುಖ್ಯ, ಪ್ರಯತ್ನ ನಿರಂತರವಾಗಿರಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಆಟದ ಬಗ್ಗೆ ಗಮನ ಕೊಡಿ, ಸೋತವರು ನಿರಾಶೆ ಹೊಂದದೆ ಮುಂದಿನ ಗುರಿಯೆಡೆಗೆ ಯೋಚಿಸಬೇಕು.ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅನಿತಾ ಆರ್. ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.