ಬಳ್ಳಾರಿ: ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಹಣ ಪಡೆಯುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.
ಮನೆ ಯಜಮಾನಿ ತಿಂಗಳಿಗೆ 2000 ಸರ್ಕಾರದ ಹಣ ಪಡೆಯಲು, ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಕೆಲವರು ನೊಂದಣಿ ಮಾಡಲು ಮಹಿಳೆಯರ ಬಳಿ ಹಣ ಪಡೆದುಕೊಳ್ಳುತ್ತಿದ್ದಾರೆ.
ಈ ಮಾಹಿತಿ ತಿಳಿದ ನಗರದ ಶಾಸಕ ನಾರಾಭರತ್ ರೆಡ್ಡಿ, ನೊಂದಣಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾತ್ರವಲ್ಲದೇ ಸರ್ಕಾರದ ಉಚಿತ ಯೋಜನೆ ಇದಾಗಿದ್ದು, ಯಾರಾದ್ರು ಹಣ ಕೇಳಿದರೆ, ನನಗೆ ಪೋನ್ ಮಾಡಿ ಎಂದು, ತಮ್ಮ (9980599999) ನಂಬರ್ ನೀಡಿದ್ದು, ಈ ಯೋಜನೆಗೆ ಯಾರೇ ಆಗಲಿ ನೊಂದಣಿ ಮಾಡಲು ಹಣ ಕೇಳಿದರೆ ಕ್ರೀಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಬ್ಯಾನರ್ ಹಾಕಿ ಲಂಚ ಪಡೆಯುವವರಿಗೆ ಎಚ್ಚರಿಕೆ ನೀಡಿದ್ದಾರೆ.
