Saturday, April 19, 2025
Google search engine

Homeರಾಜ್ಯಸುದ್ದಿಜಾಲಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ: ಎಂಎಲ್ ಸಿ ಎಚ್. ವಿಶ್ವನಾಥ್

ಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ: ಎಂಎಲ್ ಸಿ ಎಚ್. ವಿಶ್ವನಾಥ್

ಮೈಸೂರು: ಆನೆಗಳನ್ನು ಲಾರಿಯಲ್ಲಿ ಕರೆ ತರುವುದು ಸಂಪ್ರದಾಯವಲ್ಲ ಎಂದು ಎಂಎಲ್ ಸಿ ಎಚ್. ವಿಶ್ವನಾಥ್ ಆನೆಗಳನ್ನು ಲಾರಿಯಲ್ಲಿ ಕರೆ ತರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರು ದಸರಾ ಮಹೋತ್ಸವ-2023ರ ಸಂಬಂಧ ಮೈಸೂರು ಜಿಪಂ ಸಭಾಂಗಣದಲ್ಲಿ ನಡೆಯುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯುತ್ತಿದೆ.

ಈ ವೇಳೆ ದಸರಾ ಕೇಂದ್ರ ಬಿಂದು ಗಜಪಡೆಗಳ ಬಗ್ಗೆ ಅರಣ್ಯಧಿಕಾರಿ ಮಾಲತಿ ಪ್ರಿಯ ಮಾಹಿತಿ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಎಂಎಲ್ ಸಿ ಎಚ್. ವಿಶ್ವನಾಥ್, ಈ ಹಿಂದೆ ಮೈಸೂರು ಮಹಾರಾಜರೇ ಆನೆಗಳಿಗೆ ಫಲ ತಾಂಬೂಲ ನೀಡಿ ಕರೆ ತರುತ್ತಿದ್ದರು. ಆನೆಗಳನ್ನ ಕಾಲ್ನಡಿಗೆಯಲ್ಲಿಯೇ ಕರೆ ತಂದರೆ ಒಳ್ಳೆಯದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಚಿವ ಕೆ ವೆಂಕಟೇಶ್,ಶಾಸಕರಾದ ಜಿಟಿ ದೇವೇಗೌಡ,ದರ್ಶನ್ ದೃವನಾರಾಯಣ್,ಎಂಎಲ್ ಸಿ ವಿಶ್ವನಾಥ್,ಮಂಜೇಗೌಡ,ಮರೀತೀಬ್ಬೆಗೌಡ,ಮೇಯರ್ ಶಿವಕುಮಾರ್,ಡಿಸಿ ಕೆವಿ ರಾಜೇಂದ್ರ,ಅರಣ್ಯಧಿಕಾರಿ ಮಾಲತಿ ಪ್ರಿಯ,ನಗರ ಪೋಲೀಸ್ ಕಮಿಷನರ್ ರಮೇಶ್ ಬಾನೊತ್, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular