ಮೈಸೂರು : ಪೂಜೆ ಮಾಡಲು ಹೋಗಿದ್ದ ಯುವಕನೊಬ್ಬ ಕಾಲುಜಾರಿ ಬಿದ್ದು ಹೆಬ್ಬಾಳ ಜಲಾಶಯದ ನದಿಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಯುವಕನ ಸಾವಿಗೆ ಲಕ್ಷ್ಮೀ ವರದರಾಜಸ್ವಾಮಿ ಟ್ರಸ್ಟ್ ನೇರಹೊಣೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಎಚ್.ಡಿ. ಕೋಟೆ ಪಟ್ಟಣದ ನಾಯಕರ ಬೀದಿ ನಿವಾಸಿ ರಂಗಸ್ವಾಮಿ ನಾಯಕ ಎಂಬವರ ಪುತ್ರ ಸುನೀಲ್ (೨೦) ಮೃತ ಯುವಕ. ಲಕ್ಷ್ಮೀ ವರದರಾಜಸ್ವಾಮಿ ಮೂರ್ತಿಯನ್ನು ಪೂಜೆ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ನದಿಯಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ಯುವಕ ಮನೆಗೆ ಬರದೆ ಇದ್ದಾಗ ಮೆಯವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಬಳಿಕ ಆತನ ಮೃತದೇಹ ಹೆಬ್ಬಾಳ ಜಲಾಶಯದಲ್ಲಿ ಪತ್ತೆಯಾಗಿದೆ. ಈ ಸಂಭಂದ ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.