ದೇವರಿಗೆ ದೀಪ ಹಚ್ಚಿ ನಮಗೆ ಒಳ್ಳೆಯದು ಮಾಡುವ ಎಂದು ಕರ್ಪೂರದ ಆರತಿ ಬೆಳಗುತ್ತೇವೆ. ಆದರೆ ಇದೇ ಕರ್ಪೂರದಿಂದ ನಮ್ಮ ದೇಹಕ್ಕೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ನಾವು ನಿರೀಕ್ಷಿಸಬಹುದು.
ನಾವು ದೇವಸ್ಥಾನಕ್ಕೆ ಹೋದರೆ ಅಥವಾ ನಮ್ಮ ಮನೆಯ ದೇವರ ಮನೆಯಲ್ಲಿ ಕರ್ಪೂರದ ವಾಸನೆ ಗಮ್ ಎಂದು ಮೂಗಿಗೆ ಬರುತ್ತದೆ. ಮಂಗಳಾರ ತಿಯಲ್ಲಿ ದೇವರಿಗೆ ಕರ್ಪೂರದ ಆರತಿ ಇರುವುದು ಸಹಜ. ಕರ್ಪೂರದ ಸುವಾಸನೆಯಿಂದ ನಮ್ಮ ಕಾಯಿಲೆ ಗಳು ಹೋಗುತ್ತವೆ ಎಂಬ ಮಾತಿದೆ.
ಕರ್ಪೂರದ ಸುಗಂಧ ಭರಿತ ವಾಸನೆಯಲ್ಲಿ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದಾರೆ. ಇದರಿಂದ ಬ್ಯಾಕ್ಟೀರಿಯಾ, ವೈರಸ್, ಫಂಗಸ್ ಇತ್ಯಾದಿಗಳ ನಿವಾರಣೆ ಮಾಡಿಕೊಳ್ಳಬಹುದು. ಕರ್ಪೂರದ ವಿವಿಧ ಆರೋಗ್ಯ ಪ್ರಯೋಜನ ಗಳನ್ನು ತಿಳಿದುಕೊಳ್ಳೋಣ ಬನ್ನಿ.
ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ
ಆಯುರ್ವೇದದಲ್ಲಿ ಕರ್ಪೂರ ಅಗತ್ಯವಾದ ವಸ್ತುವಾಗಿದೆ. ಏಕೆಂದರೆ ಇದು ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ನಮ್ಮ ದೇಹ ದಲ್ಲಿ ಹಲವು ಬಗೆಯ ರಸಗಳ ಉತ್ಪತ್ತಿಯಲ್ಲಿ ಇದು ನೆರವಾ ಗುತ್ತದೆ. ಇದರಿಂದ ದೇಹದಲ್ಲಿ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದೆ
ಕರ್ಪೂರದಲ್ಲಿ ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಸಾಕಷ್ಟಿದ್ದು, ಆಕ್ಸಿಡೆಟೀವ್ ಒತ್ತಡವನ್ನು ನಿಯಂತ್ರಣ ಮಾಡುತ್ತದೆ. ಕಿಡ್ನಿ ಮತ್ತು ಹೃದಯದ ಕಾಯಿಲೆಗಳಿಗೆ ಅದ್ಭುತವಾಗಿ ಕೆಲಸ ಮಾಡುವ ಕರ್ಪೂರ ಮಧುಮೇಹವನ್ನು ಸಹ ನಿಯಂತ್ರಣ ಮಾಡುತ್ತದೆ ಮತ್ತು ಕ್ಯಾನ್ಸರ್ ಸಮಸ್ಯೆಯನ್ನು ತಡೆಯುತ್ತದೆ.
ಕಟ್ಟಿಕೊಂಡಿರುವ ಮೂಗು ಗಂಟಲು ಸರಿಪಡಿಸುತ್ತದೆ
ಕರ್ಪೂರ ತನ್ನ ಶಕ್ತಿಯುತವಾದ ವಾಸನೆಯಿಂದ ನೆಗಡಿ ಕಫ ಸಮಸ್ಯೆಯನ್ನು ಸಹ ದೂರಮಾಡುತ್ತದೆ ಎಂದು ಹೇಳುತ್ತಾರೆ.
ಹಾಗಾಗಿ ಇದನ್ನು ವಿವಿಧ ಬಗೆಯ ಆಯ್ನ್ಮೆಂಟ್ ಗಳಲ್ಲಿ ಬಳಸುತ್ತಾರೆ. ಇದು ನಮ್ಮ ಗಂಟಲಿನ ಭಾಗ, ಶ್ವಾಸಕೋಶ ಹಾಗೂ ಉಸಿರಾಟನಾಳದಲ್ಲಿ ಕಟ್ಟಿಕೊಂಡಿರುವ ಕಫ ಸಮಸ್ಯೆಯನ್ನು ಬಗೆಹರಿಸುತ್ತದೆ.
ನಿಮ್ಮ ಹಿಡಿದುಕೊಂಡಿರುವ ಕೈಕಾಲು ಮಾಂಸ ಖಂಡಗಳನ್ನು ಸಹ ಇದು ತಕ್ಷಣವೇ ನಿವಾರಣೆ ಮಾಡುತ್ತದೆ. ಹಾಗಾಗಿ ಮಾಂಸ ಖಂಡಗಳ ಸೆಳೆತಕ್ಕೆ ಇದು ಒಂದು ಅದ್ಭುತವಾದ ಔಷಧಿಯಾಗಿದೆ.
ನಾರ್ಕೋಟಿಕ್ ಹಾಗೆ ಕೆಲಸ ಮಾಡುತ್ತದೆ
ಇದು ನಮ್ಮ ಮೆದುಳಿನ ಹಾಗೂ ನರಮಂಡಲ ವ್ಯವಸ್ಥೆಯನ್ನು ಚುರುಕುಗೊಳಿಸುವ ಮತ್ತು ವಿಶ್ರಾಂತಗೊಳಿಸುವ ಗುಣವನ್ನು ಹೊಂದಿದೆ. ಮಿತಿಯಾಗಿ ಬಳಸುವುದರಿಂದ ಕರ್ಪೂರದಿಂದ ನೀವು ನಾರ್ಕೋಟಿಕ್ ಗುಣಲಕ್ಷಣಗಳನ್ನು ನಿರೀಕ್ಷೆ ಮಾಡ ಬಹುದಾಗಿದೆ.
ಮೂಳೆಗಳ ಕಾಯಿಲೆಗೆ ಔಷಧ
ಕರ್ಪೂರದಿಂದ ಹಲವಾರು ಮೂಳೆಗಳ ಸಮಸ್ಯೆಗಳು ಇಲ್ಲವಾಗುತ್ತವೆ. ಕೈ ಕಾಲುಗಳು ಊದಿಕೊಳ್ಳುವುದು ಮತ್ತು ಇನ್ನಿತರ ದೇಹದ ಭಾಗಗಳ ಆರೋಗ್ಯವನ್ನು ಕರ್ಪೂರದಿಂದ ನೀವು ಕಾಪಾಡಿಕೊಳ್ಳಬಹುದಾಗಿದೆ. ದೇಹದಲ್ಲಿ ಉತ್ತಮ ರಕ್ತ ಸಂಚಾರ ಮತ್ತು ಕೀಲುಗಳ ನೋವುಗಳು ಇಲ್ಲವಾಗುತ್ತವೆ.
ಕೆಮ್ಮು ಕಫ ನಿವಾರಣೆಯಾಗುತ್ತದೆ
ಉಗುರು ಬೆಚ್ಚಗಿನ ನೀರಿನಲ್ಲಿ ಕರ್ಪೂರ ಹಾಕಿ ಅದರಿಂದ ನೀರಿನ ಹಾವಿ ಯನ್ನು ಮೂಗು ಹಾಗೂ ಬಾಯಿಯ ಮೂಲಕ ತೆಗೆದು ಕೊಳ್ಳುವುದರಿಂದ ವಿವಿಧ ಬಗೆಯ ಉಸಿರಾಟದ ಅಂಗಾಂಗಗಳು ಆರೋಗ್ಯಕರವಾಗಿ ಉಳಿಯುತ್ತವೆ. ಗಂಟಲು ಕಿರಿಕಿರಿ ಕಫ ಸಮಸ್ಯೆ ಸುಲಭವಾಗಿ ನಿವಾರಣೆ ಆಗುತ್ತದೆ.
ರಾತ್ರಿ ಮಲಗುವ ಮುನ್ನ ಎದೆ ಮತ್ತು ಬೆನ್ನಿನ ಭಾಗಕ್ಕೆ ಕರ್ಪೂರದ ಎಣ್ಣೆಯಿಂದ ಮಸಾಜ್ ಮಾಡಿದರೆ ಶೀತ ಹಾಗೂ ಕೆಮ್ಮಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
ಫಂಗಲ್ ಸೋಂಕಿಗೆ ರಾಮಬಾಣ
ಕರ್ಪೂರದಲ್ಲಿ ಆಂಟಿ ಫಂಗಲ್ ಗುಣ ಲಕ್ಷಣಗಳನ್ನು ನಿರೀಕ್ಷಿಸ ಬಹುದು. ಹಾಗಾಗಿ ಇದು ಚರ್ಮದ ಮೇಲೆ ಹಾಗೂ ಉಗುರಿನ ಭಾಗದಲ್ಲಿ ಕಂಡು ಬರುವ ಸೋಂಕುಗಳನ್ನು ಸುಲಭವಾಗಿ ನಿವಾರಿಸುತ್ತದೆ. ನೀರಿಗೆ ಕರ್ಪೂರ ಹಾಕಿ ನೀವು ತೊಂದರೆ ಉಂಟಾಗಿರುವ ಜಾಗಕ್ಕೆ ಅನ್ವಯಿಸ ಬಹುದು.
ಕರ್ಪೂರದ ಬಿಲ್ಲೆಗಳನ್ನು ನುಣ್ಣಗೆ ಪುಡಿಮಾಡಿ ಕೊಂಚ ನೀರು ಬೆರೆಸಿ, ದಪ್ಪಗೆ ಪೇಸ್ಟ್ ರೀತಿ ಮಾಡಿಕೊಂಡು ಕೆಂಪಗಾಗಿರುವ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಆ ಬಳಿಕ ನೀರಿನಿಂದ ತೊಳೆದುಕೊಳ್ಳಿ
ಆರೋಗ್ಯ ಪ್ರಯೋಜನಗಳಿಗೆ ಕರ್ಪೂರ ಬಳಸುವುದು ಹೇಗೆ?
ಕರ್ಪೂರ ಮತ್ತು ನೀರು: ನಿಮ್ಮ ನೆಗಡಿ, ಕೆಮ್ಮು ಸಮಸ್ಯೆಯನ್ನು ಸುಲಭವಾಗಿ ಕರ್ಪೂರದಿಂದ ಬಗೆಹರಿಸಿಕೊಳ್ಳಬಹುದು. ಒಂದು ಬೌಲ್ ನೀರಿನಲ್ಲಿ ಒಂದು ಟೇಬಲ್ ಚಮಚ ಕರ್ಪೂರ ಹಾಕಿ ಅದನ್ನು ಚೆನ್ನಾಗಿ ಕುದಿಸಿ ಅದರ ಹಾವಿಯನ್ನು ತೆಗೆದುಕೊಳ್ಳಬಹುದು.
ಇದು ಎದೆ ಕಟ್ಟಿದ ಹಾಗೂ ಮೂಗು ಕಟ್ಟಿದ ತೊಂದರೆಯಿಂದ ನಿಮ್ಮನ್ನು ಮುಕ್ತಿಗೊಳಿ ಸುತ್ತದೆ. ದಿನಕ್ಕೆ ಮೂರು ಬಾರಿ ಇದನ್ನು ಮಾಡಬಹುದು.
ಕರ್ಪೂರ ಮತ್ತು ಇನ್ನಿತರ ಗಿಡಮೂಲಿಕೆಗಳು
ಕರ್ಪೂರ ಜೊತೆ ನೀವು ತುಳಸಿ ಎಣ್ಣೆ, ಲ್ಯಾವೆಂಡರ್ ಸಾರಭೂತ ತೈಲ, ಹೀಗೆ ಬೇರೆ ಬೇರೆ ಉಪಯುಕ್ತ ಎಣ್ಣೆಗಳನ್ನು ಬಳಸಿ ನಿಮ್ಮ ಮಾನಸಿಕ ಒತ್ತಡ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕರ್ಪೂರ ಮತ್ತು ನೀಲಗಿರಿ ಎಣ್ಣೆ
ನೀಲಗಿರಿ ಎಣ್ಣೆಯಲ್ಲಿ ಸ್ವಲ್ಪ ಕರ್ಪೂರ ಹಾಕಿ ಅದರಿಂದ ನಿಮ್ಮ ಬೆನ್ನು, ಹಣೆ ಮತ್ತು ಎದೆಯ ಭಾಗಕ್ಕೆ ಅನ್ವಯಿಸಿ ಮಸಾಜ್ ಮಾಡುವುದರಿಂದ ಸಾಕಷ್ಟು ಅನುಕೂಲವಿದೆ. ಪುಟ್ಟ ಮಕ್ಕಳಲ್ಲಿ ಕೋಲ್ಡ್ ಸಮಸ್ಯೆಯನ್ನು ಇದು ಬಗೆಹರಿಸುತ್ತದೆ.
ಕರ್ಪೂರ ಮತ್ತು ಎಳ್ಳೆಣ್ಣೆ
ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸುವ ಕೆಲಸವನ್ನು ಕರ್ಪೂರದ ಜೊತೆ ಮಿಶ್ರಣ ಮಾಡುವ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆ ಮಾಡುತ್ತದೆ. ಇದರಿಂದ ಸ್ನಾನಕ್ಕೆ ಮುಂಚೆ ನಿಮ್ಮ ದೇಹ ಮಸಾಜ್ ಮಾಡುವುದರಿಂದ ಮೈಕೈ ನೋವು ನಿವಾರಣೆಯಾಗುತ್ತದೆ.