ಹಾಸನ: ದೇಶದಲ್ಲಿ ದರ್ಶನ್ ಸುದ್ದಿ ಒಂದೇ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅದೇ ಬರ್ತಿದೆ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ.
ಹಾಸನದಲ್ಲಿ ಸುದ್ದಿಗಾರರು ದರ್ಶನ್ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಬರೀ ಅವನದ್ದೇ ತೋರಿಸುತ್ತೀರಿ. ಟಿವಿಯವರಿಗೆ ಬೇರೆ ಕೆಲಸ ಇಲ್ವಾ? ಒಳ್ಳೆಯ ಕಲಾವಿದ ಎಂದು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಎಂದ ಮಾತ್ರಕ್ಕೆ ಮಾಡಬಾರದ್ದನ್ನು ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳತ್ತೆ. ಅದನ್ನು ಬೆಳಿಗ್ಗೆ, ಸಾಯಂಕಾಲ ಏನು ಮಾಹಿತಿ ಇಲ್ಲ ಎಂದು ತೋರಿಸುತ್ತಾ ಇದ್ರೆ ನೋಡಲು ಅಸಹ್ಯ ಆಗುತ್ತೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.