ಮಂಡ್ಯ: 3 ತಿಂಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, 3 ತಿಂಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನ ಪ್ರಾರಂಭ ಮಾಡಲಿದ್ದೇವೆ. ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಕ್ಕೆ ಅನುದಾನದ ಕೊರತೆ ಇಲ್ಲ ಈಗಾಗಲೇ ಟೆಂಡರ್ ಆಗಿದೆ ಎಂದರು.
ಮಿಮ್ಸ್ ನಲ್ಲಿ ಪ್ರಗತಿ ಕುಂಠಿತ ಆಗಿದೆ ಎಂದು ಗೊತ್ತಾಯ್ತು ಅದಕ್ಕಾಗಿ ಇಂದು ಆಸ್ಪತ್ರೆಗೆ ಭೇಟಿ ನೀಡಿದೆ. ಮಿಮ್ಸ್ ಆಸ್ಪತ್ರೆಗೆ ಬಂದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ್ರೆ ಅಂತ ವೈದ್ಯರ ವಿರುದ್ಧ ಕ್ರಮ ಜರುಗಲಿದೆ. ಕೆಲಸದ ಸಮಯದಲ್ಲಿ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟಿಸ್ ಮಾಡಿದ್ರೆ ಅಂತವ್ರ ವಿರುದ್ಧಕೂಡ ಕ್ರಮ ಕೈಗೊಳ್ತಿವಿ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಸಿಗಬೇಕು ಎಂದು ಮೆಡಿಕಲ್ ಕಾಲೇಜು ಆಸ್ಪತ್ರೆ ತೆರೆಯಲಾಗಿದೆ. ಇಲ್ಲಿ ಯಾರಿಗೆ ಸರಿಯಾಗಿ ಕೆಲಸ ಮಾಡಲು ಆಗಲ್ಲ ಅವ್ರು ಜಾಗ ಖಾಲಿ ಮಾಡಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಮೂರು ತಿಂಗಳಿಂದ ಸಂಬಳ ಕೊಡದಿರುವ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರದಿಂದ ಈಗಾಗಲೇ ಪಾವತಿ ಮಾಡಲಾಗಿದೆ ಆದರೆ ವೆಂಡರ್ ಪಾವತಿ ಮಾಡಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ಹಣ ಪಾವತಿ ಮಾಡಲು ನಮಗೆ ಯಾವುದೇ ತೊಂದರೆ ಇಲ್ಲ ಎಂದರು.
ಮಿಮ್ಸ್ ನಲ್ಲಿ ಕಳ್ಳಾಟ ಆಡ್ತಿದ್ದ ವೈದ್ಯರಿಗೆ ಸಚಿವರು ಬಿಸಿ ಮುಟ್ಟಿಸಿದರು.
ಪ್ರತಿ ವಾರ್ಡ್ ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಸಚಿವರಿಗೆ ಶಾಸಕ ಗಣಿಗ ರವಿಕುಮಾರ್ ಸಾಥ್ ನೀಡಿದರು.
ವಾರ್ಡ್ ಗೆ ಭೇಟಿ ನೀಡುತ್ತಿದ್ದಂತೆ ಸಾರ್ವಜನಿಕರು ಮಿಮ್ಸ್ ಅವ್ಯವಸ್ಥೆ ಬಗ್ಗೆ ಸಚಿವರಿಗೆ ಸಾಕಷ್ಟು ದೂರು ನೀಡಿದರು. ಇದೇ ವೇಳೆ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಆಡಳಿತ ಮಂಡಳಿ ಹಾಗೂ ವೈದ್ಯರಿಗೆ ಸೂಚನೆ ನೀಡಿದರು.
ಬಳಿಕ ಸಚಿವರು ರೋಗಿಗಳ ಯೋಗಕ್ಷೇಮ ವಿಚಾರಿಸಿದರು.