Monday, April 21, 2025
Google search engine

Homeರಾಜ್ಯಜಾತಿ ಗಣತಿ ವರದಿಯಲ್ಲೇನಿದೆ ಎಂದು ಅರಿಯದೆ ಪ್ರತಿಕ್ರಿಯೆ ನೀಡಲಾರೆ: ಎಂ.ಬಿ.ಪಾಟೀಲ

ಜಾತಿ ಗಣತಿ ವರದಿಯಲ್ಲೇನಿದೆ ಎಂದು ಅರಿಯದೆ ಪ್ರತಿಕ್ರಿಯೆ ನೀಡಲಾರೆ: ಎಂ.ಬಿ.ಪಾಟೀಲ

ವಿಜಯಪುರ: ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ಮುಖ್ಯಮಂತ್ರಿಗಳಿಗೆ ಜಾತಿ ಗಣತಿ ವರದಿ ಸಲ್ಲಿಸಿದ್ದಾರೆ. ಆದರೆ ಗಣತಿಯಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ವರದಿಯಲ್ಲಿ ಏನಿದೆ ಎಂದು ಅರಿಯದೆ ಪ್ರತಿಕ್ರಿಯೆ ನೀಡಲಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ, ಆದರೆ ವರದಿಯಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ಸಚಿವನಾಗಿ ಜವಾಬ್ದಾರಿ ಸ್ಥಾನದಲ್ಲಿರುವ ನಾನು ವರದಿಯಲ್ಲಿ ಏನಿದೆ ಎಂದು ತಿಳಿಯದೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಮೀಸಲಾತಿಯ ಕಾರಣಕ್ಕೆ ಲಿಂಗಾಯತರು, ಒಕ್ಕಲಿಗ ಉಪಜಾತಿಯಲ್ಲಿ ಹಿಂದೂ, ಲಿಂಗಾಯತ ಅಂತೆಲ್ಲ ಬೇರೆ ಬೇರೆ ಜಾತಿ ಬರೆಸಿದ್ದಾರೆ. ಉಪ ಜಾತಿಯಲ್ಲಿ ಇರುವವರ ಮೀಸಲಾತಿಗೆ ಧಕ್ಕೆಯಾಗದಂತೆ ಎಲ್ಲ ಜಾತಿಗಳನ್ನೂ ಲಿಂಗಾಯತರಲ್ಲಿ ಒಂದೇ ಕಡೆ ತರಬೇಕಿದೆ ಎಂದರು.

ಸರ್ಕಾರ ಸುಭದ್ರ; 135 ಶಾಸಕರ ಬಲ ಹೊಂದಿರುವ ನಮ್ಮ ಸರ್ಕಾರ ಸುಭದ್ರವಾಗಿದೆ. ಇದರ ಹೊರತಾಗಿಯೂ ರಾಜ್ಯ ಸರ್ಕಾರ ಅಸ್ಥಿರ ಗೊಳಿಸಲು ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವಲ್ಲಿ ಅವರಿಗೆ ನಿಖರ ಮಾಹಿತಿ ಇರಬೇಕು. ಗುಪ್ತಚರ ಇಲಾಖೆ ಅವರ ಬಳಿಯೇ ಇದ್ದು, ಸರ್ಕಾರ ಪತನಕ್ಕಾಗಿ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿರುವ ನಿಖರ ಮಾಹಿತಿ ಇರುವುದರಿಂದಲೇ ಈ ಬಗ್ಗೆ ಹೇಳಿರಬಹುದು ಎಂದರು.

ಇಷ್ಟಕ್ಕೂ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಸರ್ಕಾರದ ಪತನ ಸುಲಭವಲ್ಲ. ಕಾಂಗ್ರೆಸ್ ಪಕ್ಷದ ಕನಿಷ್ಟ 50 ಶಾಸಕರು ಬೆಂಬಲ ನೀಡಬೇಕು. ಯಾವ ಶಾಸಕರೂ ಅರ್ಹರಾಗಲು ಬಯಸುವುದಿಲ್ಲ ಎಂದು ಸರ್ಕಾರ ಪತನ ಅಸಾಧ್ಯ ಎಂದರು.

RELATED ARTICLES
- Advertisment -
Google search engine

Most Popular