Saturday, April 19, 2025
Google search engine

Homeರಾಜ್ಯಸುದ್ದಿಜಾಲನಮ್ಮ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ, ಸರ್ಕಾರ ಉರುಳಿಸುವುದು ನಿಮ್ಮ ಭ್ರಮೆ: ಡಿಕೆ ಶಿವಕುಮಾರ್ ಟಾಂಗ್

ನಮ್ಮ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ, ಸರ್ಕಾರ ಉರುಳಿಸುವುದು ನಿಮ್ಮ ಭ್ರಮೆ: ಡಿಕೆ ಶಿವಕುಮಾರ್ ಟಾಂಗ್

ರಾಮನಗರ: ನಮ್ಮ ಸರ್ಕಾರವನ್ನು ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಸರ್ಕಾರ ಉರುಳಿಸುವುದು ನಿಮ್ಮ ಭ್ರಮೆ. ತಿರುಕನ ಕನಸು ಎಂದು ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಮುಡಾ ಹಗರಣದ ವಿರುದ್ಧ ಬಿಜೆಪಿ- ಜೆಡಿಎಸ್ ಆರಂಭಿಸಿರುವ ಪಾದಯಾತ್ರೆಗೆ ಟಕ್ಕರ್ ಕೊಡಲು ರಾಮನಗರದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್ ಡಿಸೆಂಬರ್‌ಗೆ ಸರ್ಕಾರ ಪಲ್ಟಿ ಮಾಡುತ್ತೇವೆ ಎಂದು ಬಿಜೆಪಿ-ಜೆಡಿಎಸ್ ನಾಯಕರು ಹೇಳುತ್ತಾರೆ, ಒಡೆಯೋಕೆ ಅದೇನು ಮಡಕೆನಾ ಎಂದು ಟಾಂಗ್ ಕೊಟ್ಟಿದ್ದಾರೆ.

೨೦೨೮ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಪಾದಯಾತ್ರೆ ಸಾಗುವ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ನಿನ್ನೆ ಆ ಭಾಗದಲ್ಲಿ ಜೆಡಿಎಸ್ ಬಾವುಟವೇ ಇರಲಿಲ್ಲ. ನಾವು ನಿನ್ನೆ ಮಾತನಾಡಿದ್ದಕ್ಕೆ ಇಂದು ಜೆಡಿಎಸ್ ಬಾವುಟ ಹಾಕಿದ್ದಾರೆ ಎಂದು ಹೇಳಿದರು.

ಬಿಜೆಪಿ ಶಾಸಕ ಯತ್ನಾಳ್, ಪತ್ರಿಕಾ ಜಾಹೀರಾತಿಗೆ ಬಿಜೆಪಿ ಉತ್ತರ ಕೊಡಬೇಕು. ಕಾವೇರಿ, ಮೇಕೆದಾಟು ನೀರಿಗೆ ಹೆಜ್ಜೆ ಹಾಕಿಲ್ಲ. ಈಗ ಕುಮಾರಸ್ವಾಮಿ ಮಂತ್ರಿ ಆಗಿದ್ದಾರೆ. ಫ್ಯಾಕ್ಟರಿ ಮಾಡ್ತೀನಿ ಅಂದಿದ್ದೀರಿ. ಉದ್ಯೋಗ ಕೊಡಿ, ಖಾಲಿ ಮಾತನಾಡಬೇಡಿ. ಚನ್ನಪಟ್ಟಣಕ್ಕೆ ಹೋಗಿದ್ದಾಗ ೨೨ ಸಾವಿರ ಜನ ಅರ್ಜಿ ಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರ ಆಮೇಲೆ ಮಾತನಾಡುತ್ತೇನೆ ಎಂದು ಎಚ್‌ಡಿ ಕುಮಾರಸ್ವಾಮಿಗೆ ಸವಾಲು ಹಾಕಿದರು.

ನಾನು ಬರುವಾಗ ವಿಪರೀತ ಮಳೆ ಇತ್ತು ಆದರೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ಪಾದಯಾತ್ರೆ ಮಾಡುವವರಿಗೆ ನೀವು ಪ್ರಶ್ನೆಗಳನ್ನು ಕೇಳಿಬೇಕು. ನುಡಿದಂತೆ ನಡೆದಿದ್ದೇವೆ, ಬದುಕನ್ನು ಬದಲಾವಣೆ ಮಾಡಿದ್ದೇವೆ. ಯಾವುದೇ ಈ ರೀತಿಯ ಕಾರ್ಯಕ್ರಮ ಬಿಜೆಪಿ ಮಾಡಿಲ್ಲ. ನಿಮ್ಮ ಬದುಕು ನಮ್ಮ ಉಸಿರು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular