ಮಂಡ್ಯ: ಮಕರ ಸಂಕ್ರಮಣ ಹಿನ್ನಲೆ ಶ್ರೀರಂಗಪಟ್ಟಣದ ಹೊರವಲಯದ ಚಂದ್ರವನ ಆಶ್ರಮದ ಚಂದ್ರಮೌಳೇಶ್ವರ ದೇಗುಲದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿಯ ನಡೆದಿದೆ.
ದೇಗುಲದ ಗರ್ಭಗುಡಿಯಲ್ಲಿನ ಶಿವಲಿಂಗವನ್ನು ಬೆಳಿಗ್ಗೆ 7-50 ಕ್ಕೆ ಸರಿಯಾಗಿ ಶಿವಲಿಂಗ ಸೂರ್ಯ ರಶ್ಮಿಯ ಕಿರಣಗಳು ಸ್ಪರ್ಶ ಮಾಡಿದೆ.
ಈ ಭಾರೀ ಅರ್ಧಗಂಟೆ ತಡವಾಗಿ ಶಿವಲಿಂಗದ ಮೇಲೆ ಸೂರ್ಯರಶ್ಮಿ ಕಿರಣ ಬಿದ್ದಿದ್ದು, ಪ್ರತಿ ವರ್ಷ ಮಕರ ಸಂಕ್ರಮಣದ ದಿನದಂದು ಈ ದೇಗುಲದಲ್ಲಿ ಈ ವಿಸ್ಮಯ ನಡೆಯುತ್ತದೆ.

ದೇಗುಲದ ಈ ವಿಸ್ಮಯ ನೋಡಲು ಹಲವೆಡೆಯಿಂದ ದೇಗುಲಕ್ಕೆ ಭಕ್ತ ವೃಂದ ಆಗಮಿಸಿದೆ.
ಮಕರ ಸಂಕ್ರಾಂತಿ ಅಂಗವಾಗಿ ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಆಶ್ರಮದಲ್ಲಿ ಸಂಕ್ರಾಂತಿ ಆಚರಣೆ ಮಾಡಲಾಗುತ್ತಿದ್ದು, ಆಶ್ರಮದಲ್ಲಿ ಗೋಪೂಜೆ ನೆರವೇರಿಸಿ ಭಕ್ತರಿಗೆ ಎಳ್ಳು ಬೆಲ್ಲ ವಿತರಿಸಲಾಗಿದೆ.
ಆಶ್ರಮದ ಪೀಠಾಧ್ಯಕ್ಷರಾದ ತ್ರಿನೇತ್ರ ಮಹಂತ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ.