ಹನೂರು: ಹಿಟ್ ಅಂಡ್ ರನ್ ಗೆ ಕೆ.ಎಸ್. ಆರ್.ಟಿ.ಸಿ ಬಸ್ ಪ್ರಯಾಣಿಕ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದ ಬಳಿ ನಡೆದಿದೆ.
ಕೌದಳ್ಳಿ ಗ್ರಾಮದ ಬಳಿ ಕೆ.ಎಸ್. ಆರ್ ಟಿ.ಸಿ ಬಸ್ ಪಂಚರ್ ಆಗಿದ್ದು , ಡ್ರೈವರ್ ಮತ್ತು ಕಂಡಕ್ಟರ್ ವೀಲ್ ಬದಲಾಯಿಸುವಾಗ ಬೆಂಗಳೂರಿನ ಮಾಗಡಿಯ ನಿವಾಸಿ ಯಶ್ವಂತ್ ವೀಲ್ ಬದಲಾಯಿಸಲು ಬೆಳಕಿನ ವ್ಯವಸ್ಥೆಗಾಗಿ ಬ್ಯಾಟರಿ ಹಿಡಿದಿರುವಾಗ ಅತೀ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಯಶ್ವಂತ್ ಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ.
ಶನಿವಾರ ರಾತ್ರಿ ನಡೆದ ದುರ್ಘಟನೆ ಸಂಬಂಧ ಕೆ.ಎಸ್ ಆರ್ ಟಿ ಸಿ ಅಧಿಕಾರಿಗಳು ಪ್ರಯಾಣಿಕ ಯಶ್ವಂತ್ ನಿಧನಕ್ಕೆ ಕಂಬನಿ ಮಿಡಿದು, ಮೂರು ಲಕ್ಷರೂ ವಿಮಾ ಹಣವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದು, ತುರ್ತಾಗಿ 25 ಸಾವಿರ ರೂ ಗಳನ್ನು ನೀಡಿದ್ದಾರೆ ಈ ಸಂಬಂಧ
ಪೊಲೀಸರು ಮೃತ ದೇಹವನ್ನು ಹನೂರು ಆಸ್ಪತ್ರೆಗೆ ಶವ ಪರೀಕ್ಷೆಗೆ ತರಲಾಗಿದೆ.