ಗುಂಡ್ಲುಪೇಟೆ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದು, ಕಾರು ಚಾಲಕನಿಗೆ ತೀವ್ರ ತರವಾದ ಗಾಯಗಳಾಗಿರುವ ಘಟನೆ ತಾಲೂಕಿನ ಬಸವಾಪುರ ಗ್ರಾಮದ ಬಳಿ ನಡೆದಿದೆ.
ಕೇರಳ ಮೂಲದ ಜೆಸ್ಮಿಲ್(29) ಮೃತ ವ್ಯಕ್ತಿ. ಕಾರು ಚಾಲಕ ಮಹಮ್ಮದ್ ಅನ್ಸಿದ್(32) ಎಂಬಾತನಿಗೆ ತೀವ್ರ ಗಾಯವಾಗಿದೆ. ಗುಂಡ್ಲುಪೇಟೆ ಕಡೆಯಿಂದ ಊಟಿಗೆ ಪ್ರಯಾಣ ಬೆಳೆಸುತ್ತಿದ್ದ ಕೇರಳ ಮೂಲದ ಕಾರು ಅತೀ ವೇಗದಿಂದ ಬಂದ ಪರಿಣಾಮದ ಮರಕ್ಕೆ ಡಿಕ್ಕಿಹೊಡೆದಿದೆ ಎನ್ನಲಾಗುತ್ತಿದೆ. ಇನ್ನೂ ಘಟನೆ ಮಾಹಿತಿ ಅರಿತ ಗುಂಡ್ಲುಪೇಟೆ ಠಾಣೆ ಪೊಲೀಸರು ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ, ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇನ್ನೂ ಘಟನೆ ಸಂಬಂಧ ಕಾರು ವಶಕ್ಕೆ ಪಡೆದ ಗುಂಡ್ಲುಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.