Thursday, April 3, 2025
Google search engine

Homeಅಪರಾಧಕಾರು - ಡಂಪರ್ ಲಾರಿ ಡಿಕ್ಕಿ: ದಂಪತಿಗಳಿಗೆ ಗಂಭೀರ ಗಾಯ

ಕಾರು – ಡಂಪರ್ ಲಾರಿ ಡಿಕ್ಕಿ: ದಂಪತಿಗಳಿಗೆ ಗಂಭೀರ ಗಾಯ

ಚಿಕ್ಕೋಡಿ: ಕಾರು(Car) ಹಾಗೂ ಡಂಪರ್ ಲಾರಿ(Dumper lorry) ಡಿಕ್ಕಿಯಾದ(Accident) ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಚಿಕ್ಕೋಡಿ(Chikkodi) ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ನಡೆದಿದೆ.

ಕಾರಿಗೆ ವೇಗವಾಗಿ ಡಂಪರ್ ನುಗ್ಗಿದ ಪರಿಣಾಮ ಕಾರ್ ನುಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದ ದಂಪತಿಗಳು ಗಂಭೀವಾಗಿ ಗಾಯಗೊಂಡಿದ್ದು, ರವೀಂದ ಹಜಾರೆ, ಅವರ ಪತ್ನಿ ವಿದ್ಯಾ ಹಜಾರೆ ಗಾಯಗೊಂಡವರು.

ಎಕ್ಸಂಬಾ ಪಟ್ಟಣದ ಬೀರೇಶ್ವರ ದೇವರ ದರ್ಶನಕ್ಕೆ ದಂಪತಿಗಳು ತೆರಳುತ್ತಿದ್ದು, ಮಲಿಕವಾಡ ಗ್ರಾಮದ ಶರ್ಯತ್ತು ಮೈದಾನದಲ್ಲಿ ಡಂಪರ್ ಲಾರಿ ಡಿಕ್ಕಿಯಾದ ಪರಿಣಾಮ ಕಾಲು ಪಲ್ಟಿಯಾಗಿ ರಸ್ತೆಯ ಪಕ್ಕಕ್ಕೆ ಬಿದ್ದಿದೆ.

ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular