ಮಂಗಳೂರು (ದಕ್ಷಿಣ ಕನ್ನಡ): ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಮಧ್ಯೆ ಮಂಗಳೂರಿನ ಗಡಿಭಾಗವಾಗಿರೋ ಕಾಸರಗೋಡು ಜಿಲ್ಲೆಯ ಪಳ್ಳಂಜಿ-ಪಾಂಡ್ಯ ರಸ್ತೆಯಲ್ಲಿ ಕಾರೊಂದು ಹೊಳೆಗೆ ಬಿದ್ದ ಘಟನೆ ನಡೆದಿದೆ. ತಡೆಬೇಲಿ ಇಲ್ಲದ ಸೇತುವೆಯಿಂದ ಕಾರು ಹೊಳೆಗೆ ಬಿದ್ದಿದೆ.
ಕಾರಿನಲ್ಲಿದ್ದ ರಶೀದ್, ತಸ್ರೀಫ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ.ತುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ಮರವನ್ನು ಹಿಡಿದು ಕಾರಲ್ಲಿದ್ದವರು ಜೀವ ರಕ್ಷಿಸಿಕೊಂಡಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಹೊಳೆ ತುಂಬಿ ಹರಿಯುತ್ತಿತ್ತು.
