Friday, April 4, 2025
Google search engine

Homeಅಪರಾಧಬೆಂಗಳೂರು-ಮೈಸೂರು ಬೈಪಾಸ್ ನಲ್ಲಿ ಉರುಳಿದ ಕಾರು:ಐವರಿಗೆ ಗಾಯ

ಬೆಂಗಳೂರು-ಮೈಸೂರು ಬೈಪಾಸ್ ನಲ್ಲಿ ಉರುಳಿದ ಕಾರು:ಐವರಿಗೆ ಗಾಯ

ಮಂಡ್ಯ:ನಗರದ ಹೊರವಲಯದ ಚಿಕ್ಕಮಂಡ್ಯ ಬಳಿ ಬೆಂಗಳೂರು- ಮೈಸೂರು ಬೈಪಾಸ್ ನಲ್ಲಿ ತರಳುತ್ತಿದ್ದ ಕಾರಿನ ಟೈರ್ ಬ್ಲಾಸ್ಟ್ ಆಗಿ ಭೀಕರ ಅಪಘಾತ ಸಂಭವಿಸಿದೆ.
ಕಾರಿನ ಟೈರ್ ಸ್ಫೋಟಗೊಂಡಿದ್ದ
ರಿಂದ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿದ್ದು,ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ .
ಗಾಯಾಳುಗಳನ್ನು ಶ್ರೀಕಾಂತ್, ಕೃಷ್ಣನ್, ಮಂಜುನಾಥ್, ಅರ್ಜುನ್, ಮೂರ್ತಿ ಎಂದು ಗುರುತಿಸಲಾಗಿದ್ದು ಬೆಂಗಳೂರು ಮೂಲದವರಾಗಿದ್ದಾರೆ
ಅಪಘಾತದಲ್ಲಿ ಗಾಯಗೊಂಡವರಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಪಘಾತದಿಂದ ಕೆಲಹೊತ್ತು ಸಂಚಾರದಟ್ಟಣೆ ಉಂಟಾಗಿತ್ತು, ಪೊಲೀಸರು ಅಪಘಾತಗೊಂಡ ಕಾರನ್ನು ದಶಪಥ ಹೆದ್ದಾರಿಯಿಂದ ತೆರವುಗೊಳಿಸಿ ಸುಗಮವಾಹನ ಸಂಚಾರಕ್ಕೆ ಅನುವು
ಮಾಡಿಕೊಟ್ಟರು.

RELATED ARTICLES
- Advertisment -
Google search engine

Most Popular