Sunday, August 24, 2025
Google search engine

Homeರಾಜ್ಯಸುದ್ದಿಜಾಲನಾಳೆ ಧರ್ಮಸ್ಥಳ ಪರ ಕಾರು ರ‍್ಯಾಲಿ : ಸಾ.ರಾ.ಮಹೇಶ್ ನೇತೃತ್ವದಲ್ಲಿ ಭಕ್ತರ ಯಾತ್ರೆ

ನಾಳೆ ಧರ್ಮಸ್ಥಳ ಪರ ಕಾರು ರ‍್ಯಾಲಿ : ಸಾ.ರಾ.ಮಹೇಶ್ ನೇತೃತ್ವದಲ್ಲಿ ಭಕ್ತರ ಯಾತ್ರೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಜೆಡಿಎಸ್ ನ ಮಾಜಿ ಸಚಿವ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಸಾ.ರಾ.ಮಹೇಶ್ ಅವರ ನೇತೃತ್ವದಲ್ಲಿ ಇದೇ ನಾಳೆ ಆಗಸ್ಟ್ 25ರ ಸೋಮವಾರ ಬೆಳಗ್ಗೆ 4.30 ಗಂಟೆಗೆ ‘ಧರ್ಮಸ್ಥಳ ಪರ’ ಎಂಬ ಘೋಷಣೆಯ ವಾಕ್ಯಗಳೊಂದಿಗೆ ಕಾರುಗಳು ಮೂಲಕ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.

ಮಂಡ್ಯ ಜಿಲ್ಲೆಯ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಮಾಜಿ ಶಾಸಕರಾದ ಪಿರಿಯಾಪಟ್ಟಣದ ಕೆ.ಮಹದೇವ್, ತೀ.ನರಸೀಪುರ ದ ಅಶ್ವಿನ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರ ಸಹ ಭಾಗಿತ್ವದಲ್ಲಿ ಮೈಸೂರು ನಗರದ ದಟ್ಟಗಳಿಯ ಸಾ.ರಾ.ಕನ್ವೆನ್ಷನ್ ಹಾಲ್ ನಿಂದ ಅಂದಾಜು 40ಪಾಲ್ಗೊಳ್ಳಲಿದ್ದಾರೆ. ಗಳ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಯಾತ್ರೆಯನ್ನು ಹಮ್ಮಿ ಕೊಳ್ಳಲಾಗಿದೆ.

ಮೈಸೂರು ಜಿಲ್ಲೆಯ ಭಕ್ತರ ಯಾತ್ರೆಯು ಮೈಸೂರು ನಗರದ ಸಾ.ರಾ. ಕನ್ವೆನ್ಸನ್ ಹಾಲ್‌ನಿಂದ ಇಲವಾಲ, ಕೆ.ಆರ್.ನಗರ ಪಟ್ಟಣದ ತೋಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಸಾಲಿಗ್ರಾಮ, ಹರದನಹಳ್ಳಿ, ಮಾರ್ಗವಾಗಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ, ಕೊಣನೂರು, ಸಿದ್ದಾಪುರ-ಬಾಣಾವರ ಮೂಲಕ ಶನಿವಾರಸಂತೆ, ಕೂಡುರಸ್ತೆ, ಬಿಸಿಲೆ ಘಾಟ್, ಸುಬ್ರಮಣ್ಯ-ಕುಲ್ಕುಂದ ಗೇಟ್ ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಲಾಗುತ್ತದೆ.

ಧರ್ಮಸ್ಥಳ ಪರ ಯಾತ್ರೆಗೆ ಮೈಸೂರು ಜಿಲ್ಲೆ ಸೇರಿದಂತೆಜಿ.ಪಂ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾ ಪೌರರು, ಮಾಜಿ ಉಪ ಮಹಾಪೌರರು ಮತ್ತು ಮಾಜಿ ಸದಸ್ಯರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೈಗೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯಾತ್ರೆಗೆ ಮೈಸೂರು ಜಿಲ್ಲೆಯಿಂದ 400 ಕ್ಕೂ ಹೆಚ್ಚು ಕಾರು ಹಾಗೂ ಇತರೆ ವಾಹನಗಳಲ್ಲಿ ಪ್ರಯಾಣ ಬೆಳಸಲಾಗುತ್ತದೆ ಎಂದು ಮೈಸೂರು ದಕ್ಷಿಣ ವಲಯದ ಪೊಲೀಸ್ ಉಪ ಮಹಾನಿರೀಕ್ಷಕರಿಗೆ ಮಾಜಿ ಸಚಿವರು ಹಾಗೂ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷರಾದ ಸಾ.ರಾ‌ಮಹೇಶ್ ಪತ್ರ ಬರೆದಿದ್ದಾರೆ.

RELATED ARTICLES
- Advertisment -
Google search engine

Most Popular