Tuesday, April 15, 2025
Google search engine

Homeಸ್ಥಳೀಯಕಾರು ಅಡ್ಡಗಟ್ಟಿ ದರೋಡೆ: ಹಣ, ಕಾರು ಸಮೇತ ಪರಾರಿ

ಕಾರು ಅಡ್ಡಗಟ್ಟಿ ದರೋಡೆ: ಹಣ, ಕಾರು ಸಮೇತ ಪರಾರಿ

ಮೈಸೂರು: ಜಯಪುರ ತಾಲ್ಲೂಕಿನ ಗುಜ್ಜೇಗೌಡನಪುರ ಗ್ರಾಮದ ಬಳಿ ನಿನ್ನೆ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ಮುಸುಕುಧಾರಿಗಳ ಗುಂಪೊಂದು ಅವರಿಗೆ ಹಲ್ಲೆ ನಡೆಸಿ, ೧.೫ ಲಕ್ಷ ರೂ. ಕಸಿದು ಕಾರಿನೊಂದಿಗೆ ಪರಾರಿಯಾಗಿದ್ದಾರೆ.

ಕೇರಳ ಮೂಲದ ಉದ್ಯಮಿ ಸೂಫಿ ಎಂಬವರ ಮೇಲೆ ಈ ದಾಳಿ ನಡೆದಿದೆ. ಮುಸುಕುಧಾರಿಗಳಾಗಿದ್ದ ದುಷ್ಕರ್ಮಿಗಳು ಕಾರನ್ನೇ ಕದ್ದೊಯ್ದಿದ್ದಾರೆ. ಇದರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular