Wednesday, April 16, 2025
Google search engine

Homeಸ್ಥಳೀಯಮುಡಾ ಆಯುಕ್ತರ ನಿವಾಸದಲ್ಲಿ ಸಿಸಿ ಟಿವಿ ನಾಪತ್ತೆ ಪ್ರಕರಣ: ವಿವರಣೆ ನೀಡುವಂತೆ ನೋಟಿಸ್

ಮುಡಾ ಆಯುಕ್ತರ ನಿವಾಸದಲ್ಲಿ ಸಿಸಿ ಟಿವಿ ನಾಪತ್ತೆ ಪ್ರಕರಣ: ವಿವರಣೆ ನೀಡುವಂತೆ ನೋಟಿಸ್

ಮೈಸೂರು: ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಹಿರಂಗಗೊಂಡ ಬೆನ್ನಲ್ಲೆ ಮುಡಾ ಆಯುಕ್ತರ ನಿವಾಸದಲ್ಲಿ ಸಿಸಿ ಕ್ಯಾಮರಾ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಡಾ ಆಯುಕ್ತ ರಘುನಂದನ್, ಮುಡಾ ಕಟ್ಟಡ ನಿರ್ವಹಣಾ ಅಧಿಕಾರಿಗಳಿಗೆ ನೋಟಿಸ್ ಕೊಟ್ಟಿದ್ದೇನೆ. ಘಟನೆ ಸಂಬಂಧ ಸಂಪೂರ್ಣ ವಿವರ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಮುಡಾ ಆಯುಕ್ತ ರಘುನಂದನ್, ನಾನು ಜವಾಬ್ದಾರಿ ವಹಿಸಿಕೊಂಡು ಕೆಲವೇ ದಿನವಾಗಿದೆ‌. ಹಿಂದಿನ ಆಯುಕ್ತರು ಕೂಡ ಕಚೇರಿ ನಿವಾಸವಾಗಿ ಬಳಕೆ ಮಾಡಿಕೊಂಡಿದ್ರು. ಹೀಗಾಗಿ ಅಲ್ಲಿ ಯಾರಿದ್ರು, ಏನೆಲ್ಲಾ ವಸ್ತುಗಳಿದ್ದವು ಇದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಅಲ್ಲಿ ಸಿಸಿ ಕ್ಯಾಮರಾ ಇದ್ದ ಬಗ್ಗೆ ಈಗ ಇಲ್ಲದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಟ್ಟಡ ನಿರ್ವಹಣ ಅಧಿಕಾರಿ ಕೂಡ ಹೊಸಬರಾಗಿರುವ ಕಾರಣ ತಕ್ಷಣದಲ್ಲಿ ಅವರಿಗೂ ಯಾವುದೇ ಮಾಹಿತಿ ಇಲ್ಲ‌. ಹೀಗಾಗಿ ಎರಡು ದಿನದಲ್ಲಿ ಮಾಹಿತಿ ತರಿಸಿಕೊಡಲು ಹೇಳಿದ್ದೇನೆ ಎಂದರು.

ಮುಡಾದಲ್ಲಿ ಎಲ್ಲಾ ಕೆಲಸ ನಡೆಯುತ್ತಿದೆ. ನಿಯಮದ ಪ್ರಕಾರ ಕೆಲಸ‌ ಮಾಡಲು ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ಸೂಚನೆಯಂತೆ ಮುಡಾದಲ್ಲಿ ಎಲ್ಲಾ ಕೆಲಸ ನಡೆಯುತ್ತಿದೆ. ಈ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ‌. ಸಾರ್ವಜನಿಕರು ಬಂದು ದೈನಂದಿನ ಮುಡಾ ಕೆಲಸ ಮಾಡಿಸಿ ಕೊಳ್ಳಬಹುದು ಎಂದು ಮುಡಾ ಆಯುಕ್ತ ರಘುನಂದನ್ ಹೇಳಿದರು.

RELATED ARTICLES
- Advertisment -
Google search engine

Most Popular