ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯರನ್ನು ಫೇಸ್ ಬುಕ್ ನಲ್ಲಿ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸುಳ್ಯ ವಿಧಾನಸಭಾ ಶಾಸಕಿಯವರ ಫೋಟೊವನ್ನು ಅವಹೇಳನ ರೀತಿಯಲ್ಲಿ ಬರಹಗಳನ್ನು ಹಾಕಿ, ಸುಳ್ಳು ಅಪಪ್ರಚಾರವನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್‌ನಲ್ಲಿ ಪ್ರಚಾರ ಮಾಡಿರುವ ಆರೋಪಿ ಸಂದೇಶ ಯಾನೆ ಸೀತಾರಾಮ ಬಂಟ್ವಾಳ ತಾಲೂಕು ಎಂಬಾತನ ವಿರುದ್ದ ದಾಖಲಾಗಿದ್ದ ದೂರರ್ಜಿಗೆ ಸಂಬಂದಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:03/2026 ಕಲಂ: 352, ಬಿಎನ್ ಎಸ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



