ಬೆಟ್ಟದಪುರ: ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸಿ.ಆರ್ ಮರೀಗೌಡ ಎಂಬುವರಿಗೆ ಸೇರಿದ ಮನೆಯ ಪಕ್ಕದಲ್ಲಿಯೇ ನಿರ್ಮಾಣ ಮಾಡಲಾಗಿದ್ದ ದನದಕೊಟ್ಟಿಗೆಯ ಮೇಲ್ಛಾವಣಿಯು ಇಂದು ಬೆಳಗ್ಗಿನ ಜಾವ ಬಂದoತಹ ಬಿರುಗಾಳಿ ಮಳೆಗೆ ಮುರಿದು ಕುಸಿದಿದೆ. ಅದೃಷ್ಟವಾಶತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿರುವ ನಮಗೆ ದನದ ಕೊಟ್ಟಿಗೆ ಕುಸಿತದಿಂದ ಅಪಾರ ನಷ್ಟ ಊಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಸಿ.ಆರ್ ಮರೀಗೌಡ ಮನವಿ ಮಾಡಿದ್ದಾರೆ