Monday, September 15, 2025
Google search engine

Homeರಾಜ್ಯಕಾವೇರಿ ಆರತಿ ವಿಚಾರ: ತಡೆಯಾಜ್ಞೆಗೆ ಡಿ.ಕೆ ಶಿವಕುಮಾರ್ ತಿರುಗೇಟು

ಕಾವೇರಿ ಆರತಿ ವಿಚಾರ: ತಡೆಯಾಜ್ಞೆಗೆ ಡಿ.ಕೆ ಶಿವಕುಮಾರ್ ತಿರುಗೇಟು

ಮಂಡ್ಯ: ಕಾವೇರಿ ಆರತಿ ವಿಚಾರ ಕೋರ್ಟ್​​​​ನಲ್ಲಿದ್ದು ಕಾವೇರಿಗೆ ಪೂಜೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿರೋಧಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.

ಜಿಲ್ಲಾಡಳಿತ ಮಂಡ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ  ಆಯೋಜಿಸಲಾಗಿದ್ದ ಗಗನ ಚುಕ್ಕಿ ಜಲಪಾತೋತ್ಸವ-2025 ಕಾರ್ಯಕ್ರಮದಲ್ಲಿ, ಕಾವೇರಿ ಮಾತೆಗೆ ಪೂಜೆಗೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, ಕಾವೇರಿ ಮಾತೆಗೆ ನಾವು ಪೂಜೆಯನ್ನು ಮಾಡೇ ಮಾಡುತ್ತೇವೆ. ಅದನ್ನೂ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.

ವಾರಣಾಸಿಯ ಗಂಗಾರತಿ ಮಾದರಿಯಲ್ಲಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕಾವೇರಿ ಆರತಿ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಆದ್ರೆ ಇದಕ್ಕೆ ಪ್ರಾರಂಭದಿಂದಲೂ ಪರ ವಿರೋಧ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಲೇ ಇದೆ.

ಇತ್ತೀಚೆಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು, ಕಾವೇರಿ ಆರತಿಯ ವಿಚಾರ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಈ ವಿಚಾರಣೆ ಮುಕ್ತಾಯವಾದ ನಂತರ ಕಾವೇರಿ ಆರತಿಯ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ನಾವು ಗ್ಯಾರೆಂಟಿಗಳನ್ನು ಘೋಷಣೆ ಮಾಡಿದಾಗ ಮತ್ತು ಅದನ್ನು ಜಾರಿಗೆ ತಂದಾಗ ಬಿಜೆಪಿ ನಾಯಕರು ನಮ್ಮ ಯೋಜನೆಗಳನ್ನು ಟೀಕಿಸಿದ್ದರು. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದಿದ್ದರು. ಆದ್ರೆ ಆ ಬಳಿಕ ಅವರೇ ದೆಹಲಿಯಲ್ಲಿ ಗ್ಯಾರೆಂಟಿ ಘೋಷಣೆ ಮಾಡಿದ್ರು, ನಂತರ ಬಿಹಾರದಲ್ಲೂ ಘೋಷಣೆ ಮಾಡಿದ್ದಾರೆ ಎಂದು ಸಚಿವರು ಕುಟುಕಿದ್ದರು.

ಕಾವೇರಿ ಆರತಿಗೆ ಕರ್ನಾಟಕ ಹೈಕೋರ್ಟ್ ಕಳೆದ ಜೂನ್ 27ರಂದು ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಅಣೆಕಟ್ಟು, ಪರಿಸರ, ನದಿಗೆ ಅಪಾಯ ಆಗಬಹುದು ಎಂದು ಹೈಕೋರ್ಟ್​ಗೆ ರೈತ ಸಂಘ ಮನವರಿಕೆ ಮಾಡಿಕೊಟ್ಟಿತ್ತು. 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿ, ಕಾವೇರಿ ಆರತಿಗೆ ತಡೆಯಾಜ್ಞೆ ನೀಡಿತ್ತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವಾಕಾಂಕ್ಷೆ ಘೋಷಣೆಯಾಗಿರುವ ಕಾವೇರಿ ಆರತಿಗೆ ಸಿದ್ಧತೆಗಳು ಆರಂಭಗೊಂಡಿವೆ. ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದೆ. ‘10 ಸಾವಿರ ಆಸನಗಳ ವ್ಯವಸ್ಥೆ ಮಾಡುತ್ತೇವೆ. ಇದರಲ್ಲಿ ಶೇ. 70% ಆಸನಗಳು ಉಚಿತ, ಶೇ. 30% ಸೀಟುಗಳನ್ನು ಟಿಕೆಟ್ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು. ಈ ನಡುವೆ ಕಾವೇರಿ ಆರತಿಯ ಪೂರ್ಜಾ ಕೈಂಕರ್ಯವನ್ನು ಮುನ್ನಡೆಸಲು ಬರೋಬ್ಬರಿ 300 ಜನರಿಗೆ ತರಬೇತಿ ನೀಡಲಾಗುತ್ತಿದೆ. ಆದಿಚುಂಚನಗಿರಿ ಹಾಗೂ ಜೆಎಸ್‌ಎಸ್‌ನಲ್ಲಿರುವ ಸಂಸ್ಕೃತ ಪೀಠದ ಮೂಲಕ 300 ಜನರಿಗೆ ಕಾವೇರಿ ಆರತಿಗೆ ಸಂಬಂಧಿಸಿದ ತರಬೇತಿ ನೀಡಲಾಗುತ್ತಿದೆ’ ಎಂದು ಡಿಸಿಎಂ ಡಿಕೆಶಿ ಹೇಳಿದ್ದರು.

ಆಗಮ ಶಾಸ್ತ್ರದಲ್ಲಿ ಈಗಾಗಲೇ ಪರಣತಿ ಹೊಂದಿರುವವರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಕಾರ್ಯವಾಗುತ್ತಿದೆ. ಸಂಸ್ಕೃತ ಪೀಠದಲ್ಲಿ ನೀಡುತ್ತಿರುವ ತರಬೇತಿ ಮೇಲ್ವಿಚಾರಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಈ ಎರಡು ಕೇಂದ್ರದಲ್ಲಿ ಆರತಿಯ ಬಗ್ಗೆ ತರಬೇತಿ ನೀಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular