ಮಂಡ್ಯ : ಕಾವೇರಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಾನೂನು ಹೋರಾಟಕ್ಕೆ ಸರ್ಕಾರ ಹೊರತುಪಡಿಸಿ ಪ್ರತ್ಯೇಕವಾಗಿ ಇಂದು ರೈತ ಸಂಘದಿಂದ ಅರ್ಜಿ ಸಲ್ಲಿಸಲಾಗುವುದು ಎಂದು ಕೆಆರ್‌ಎಸ್‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ. ನಂತರ ಮಾತನಾಡಿ ಸರ್ಕಾರ ಮಾಡಿರುವ ಕೇಸ್ ಫೈಲ್ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇವೆ. ಮಾಜಿ ಅಡ್ವಕೇಟ್ ಜನರಲ್ ರವಿವರ್ಮ ಅವರಿಂದ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಇಂದು ಬೆಂಗಳೂರಿನಲ್ಲಿ ಅರ್ಜಿಯನ್ನು ಸಲ್ಲಿಸುತ್ತೇವೆ. ಬುಧವಾರ ವಿಚಾರಣೆಗೆ ಬರುವ ಹಾಗೆ ನಾವು ಸಲ್ಲಿಸುವ ಅರ್ಜಿ ಸಲ್ಲಿಸುತ್ತೇವೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ನಾವು ಉಲ್ಲೇಖ ಮಾಡುತ್ತೇವೆ. ಪ್ರಾಧಿಕಾರ ಸ್ಥಳಕ್ಕೆ ಬಂದು ವಸ್ತುಸ್ಥಿತಿ ತಿಳಿಯಬೇಕು. ಇರುವ ನೀರಿನ ಲೆಕ್ಕಾಚಾರವನ್ನು ಅವರೇ ಹಾಕಬೇಕು. ಮುಂದೆ ಮಳೆ ಬೀಳಲಿಲ್ಲ ಅಂದ್ರೆ 12 ಟಿಎಂಸಿ ಹೇಗೆ ಸಾಲುತ್ತೆ ಎನ್ನೋದು ಅವರೆ ತಿಳಿಯಲಿ. ಬೆಂಗಳೂರಿಗೆ 30 ಟಿಎಂಸಿ ನೀರು ಬೇಕು. ಹೀಗಾಗಲೇ ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳಿಗೆ ನೀರು ಕೊಡ್ತಾ ಇದ್ದಾರೆ. ಮುಂದೆ ಕುಡಿಯೋ ನೀರು ಕೋಡೋಕು ಆಗಲ್ಲ. ಐಸಿಸಿ ಸಭೆಯಲ್ಲಿ ನಾಟಿ ಮಾಡಿ ಎಂದು ಹೇಳಿದ್ರು. ಹೀಗಾಗಲೇ ಎಲ್ಲರೂ ನಾಟಿ ಮಾಡಿದ್ದಾರೆ. ಬೆಳೆ ಪರಿಹಾರಕ್ಕೆ ಪ್ರತ್ಯೇಕ ಪ್ಯಾಕೇಜ್ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.