ಮಂಡ್ಯ: ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ
ರಾಜಕಾರಣದ ಮಾತು ಬಿಟ್ಟು ರೈತರ ಸಮಸ್ಯೆ ಬಗೆಹರಿಸಿ ಎಂದು ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಮಾತನಾಡಿ, ನಿರಂತರವಾಗಿ ಕಾವೇರಿ ಹೋರಾಟ ನಡೆಯುತ್ತಿದ್ದು ನಾವು ಮಹಾರಾಜರನ್ನ ನೆನಪು ಇಟ್ಟುಕೊಳ್ಳಬೇಕು. ೫೫ ದಿನದಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಕಾವೇರಿಗಾಗಿ ಹೋರಾಟ ನಡೆಯುತ್ತಿದೆ. ಕಾವೇರಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಎಲ್ಲಾ ಸರ್ಕಾರಗಳು ಯಡವಟ್ಟು ಮಾಡಿಕೊಂಡು ಬರುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದ್ದು ಆದನ್ನು ಉಳಿಸಿ ಕೊಳ್ಳಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ.ಸರ್ಕಾರವನ್ನು ಎದುರಿಸಿ ನಿಲ್ಲುವ ಅವಶ್ಯಕತೆ ಇದೆ.ಮಂಡ್ಯ ಜಿಲ್ಲೆ ಒಂದು ಕಾಲದಲ್ಲಿ ರೈತರ ಹೋರಾಟಕ್ಕೆ ಎದುರುವರು.ರೈತರ ಗತ್ತು ಅವಾಗ ಹೆಚ್ಚು ಇತ್ತು.ಯಾವುದೇ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು.ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲಾ ಸರ್ಕಾರ ರೈತರ ಅರ್ಥಮಾಡಿಕೊಳ್ಳುವಲ್ಲಿ ಎಡವಿದೆ.ನಾನು ಕೂಡ ಒಬ್ಬ ರೈತ.ಸರ್ಕಾರ ಕೂಡಲೇ ರೈತರನ್ನ ಮಾತುಕತೆಗೆ ಕರೆಯಬೇಕು. ೨೭ ಜನ ಸಂಸದರನ್ನ ಆಯ್ಕೆ ಮಾಡಿ ಕಳುಹಿಸಿದ್ದಾರೆ ಇದುವರೆಗೆ ಬಾಯಿ ಬಿಟ್ಟಿಲ್ಲ
ಜನರಿಗೆ ಅನ್ನ ಮುಖ್ಯ.ಸಿದ್ದರಾಮಯ್ಯ ಅನ್ನ ಕೊಟ್ಟೆ ಅಂತಾರೆ ಅನ್ನ ಕೊಡುವುದು ಅನ್ನದಾತ,ಅನ್ನ ಬ್ರಹ್ಮ ನಮ್ಮ ರೈತರುಸರ್ಕಾರ ಅನ್ನದಾತರ ಸಮಸ್ಯೆ ಕೇಳುತ್ತಿಲ್ಲ.ಸರ್ಕಾರಗಳಿಗೆ ಜವಾಬ್ದಾರಿ ಇದೆ, ಸಂಸದರಿಗೆ ಜವಾಬ್ದಾರಿ ಇದೆ.ಏನೇನೋ ಮಾತನಾಡದೆ ನೀರಿನ ಬಗ್ಗೆ ಮಾತನಾಡಿ.ಮೊದಲು ರೈತರ ಸಮಸ್ಯೆ ಬಗೆಹರಿಸಿ.
ಸರ್ಕಾರಕ್ಕೆ ಎಚ್ಚರಿಕೆ ಕೊಡ್ತಿದ್ದೇನೆ.ಸರ್ಕಾರ ಬಹಳ ಜವಾಬ್ದಾರಿಯುತವಾಗಿ ನಡೆಯಬೇಕು.ಜವಾಬ್ದಾರಿಯುತ ಕೇಂದ್ರ-ರಾಜ್ಯ ಸರ್ಕಾರ ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.ತಕ್ಷಣವೇ ನೀರು ನಿಲ್ಲಿಸಿ ಕಾವೇರಿ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆಯಿರಿ.ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಧರಣಿಯಲ್ಲಿ ರೈತ ನಾಯಕಿ ಸುನಂದಾ ಜಯರಾಂ, ಕನ್ನಡ ಸೇನೆ ಮಂಜುನಾಥ್, ಸೇರಿ ರೈತ ಮುಖಂಡರು ಭಾಗಿಆಗಿದ್ದರು.