ಮಂಡ್ಯ: ಕಾವೇರಿ ನದಿ ನೀರು ನಮ್ಮ ಹಕ್ಕು, ಕಾವೇರಿ ನಮ್ಮದು ರಕ್ಷಿಸೋಣ ಬನ್ನಿ ಎಂದು ರೈತರು ಪೋಸ್ಟರ್ ಅಭಿಯಾನ ನಡೆಸಿ.ದ್ದಾರೆ
ಮಂಡ್ಯ ನಗರದ ಮಹಾವೀರ ವೃತ್ತದ ಅಂಚೆ ಕಚೇರಿ, ಹೆದ್ದಾರಿಯಲ್ಲಿ ನಿಂತ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಪೋಸ್ಟರ್ ಅಂಟಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 128 ದಿನಗಳಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿಯ ಧರಣಿ ನಡೆಯುತ್ತಿದ್ದು, ರಸ್ತೆ ತಡೆ, ಉಪವಾಸ ಸತ್ಯಾಗ್ರಹ, ಕರ ಪತ್ರ ಚಳುವಳಿ ಬಳಿಕ ಕಾವೇರಿಗಾಗಿ ಪೋಸ್ಟರ್ ಅಭಿಯಾನ ಆರಂಭವಾಗಿದೆ.
ಪ್ರಾಧಿಕಾರದ ಆದೇಶ ವಿರೋಧಿಸಿ ಪೋಸ್ಟರ್ ಅಭಿಯಾನ ನಡೆಯುತ್ತಿದ್ದು, ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ರೈತರ ಹೋರಾಟವನ್ನ ಕಡೆಗಣಿಸಿದೆ. ಕಾವೇರಿ ನಮ್ಮದು ನಾವೇ ಉಳಿಸಿಕೊಳ್ಳಬೇಕಾಗಿದೆ. ಸರ್ಕಾರ ನಮ್ಮ ನೀರನ್ನ ಉಳಿಸಿಕೊಳ್ಳಲ್ಲ. ನಾವೇಲ್ಲರು ಒಟ್ಟಿಗೆ ಸೇರಿ ನಮ್ಮ ನೀರು ನಮ್ಮ ಹಕ್ಕು ಉಳಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಕರೆ ನೀಡಿದರು.