Sunday, April 20, 2025
Google search engine

Homeರಾಜ್ಯತಮಿಳುನಾಡಿಗೆ ಕಾವೇರಿ ನೀರು ಸ್ಥಗಿತ: ಇಂದು ದೆಹಲಿಯಲ್ಲಿ CWMA ಸಭೆ

ತಮಿಳುನಾಡಿಗೆ ಕಾವೇರಿ ನೀರು ಸ್ಥಗಿತ: ಇಂದು ದೆಹಲಿಯಲ್ಲಿ CWMA ಸಭೆ

ಮಂಡ್ಯ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಅಂತ್ಯಗೊಂಡ ಹಿನ್ನಲೆ ಇಂದಿನಿಂದ ತಮಿಳುನಾಡಿಗೆ ಕೆಆರ್ ಎಸ್ ಡ್ಯಾಂನಿಂದ ಹರಿಸಲಾಗುತ್ತಿದ್ದ ಕಾವೇರಿ ನೀರನ್ನು ಸ್ಥಗಿತಗೊಳಿಸಲಾಗಿದೆ.

ಅಕ್ಟೋಬರ್ 30 ರವರೆಗೂ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು CWRC ಮತ್ತು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. CWRC ಆದೇಶದಂತೆ ಕಳೆದ ಒಂದು ತಿಂಗಳಿನಿಂದ ರಾಜ್ಯ ಸರ್ಕಾರ ತಮಿಳು ನಾಡಿಗೆ ನೀರು ಬಿಡುಗಡೆ ಮಾಡಿತ್ತು.

ರಾಜ್ಯ ಸರ್ಕಾರ ನೀರು ಬಿಡುಗಡೆಯ ಕ್ರಮಕ್ಕೆ ರಾಜ್ಯವಾಪಿ  ಆಕ್ರೋಶ ವ್ಯಕ್ತವಾಗಿತ್ತು. ಆದೇಶ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಕೆಆರ್ ಎಸ್ ನಿಂದ ಹರಿಸಲಾಗಿತ್ತಿದ್ದ ನೀರನ್ನು ಸ್ಥಗಿತ‌ಗೊಳಿಸಲಾಗಿದೆ.

ಇಂದು ಮತ್ತೆ ದೆಹಲಿಯಲ್ಲಿ CWMA ಸಭೆ ನಡೆಯಲಿದೆ. ಮತ್ತೆ ನೀರಿಗಾಗಿ ತಮಿಳುನಾಡು ಸರ್ಕಾರ ಬೇಡಿಕೆ ಇಟ್ಟಿದೆ. ರಾಜ್ಯದಿಂದ ಇನ್ನು ನೀರು ಬಿಡುಗಡೆ ಸಾದ್ಯವಿಲ್ಲ ಎಂದು ವಾದ ಮಂಡನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಇಂದು ದೆಹಲಿಯಲ್ಲಿ ನಡೆಯಲಿರುವ  CWRC ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಕೆ.ಆರ್.ಸಾಗರ ಅಣೆಕಟ್ಟೆಯ ಇಂದಿನ ನೀರಿನ ಮಟ್ಟ

ಗರಿಷ್ಟ ಮಟ್ಟ: 124.80 ಅಡಿ

ಇಂದಿನ ಮಟ್ಟ : 99.50 ಅಡಿ

ಒಳಹರಿವು    : 531 ಕ್ಯೂಸೆಕ್

ಹೊರಹರಿವು : 567 ಕ್ಯೂಸೆಕ್

ಪ್ರಸ್ತುತ ಸಂಗ್ರಹ :22.422 TMC

RELATED ARTICLES
- Advertisment -
Google search engine

Most Popular