ಬೆಂಗಳೂರು : ಕಾವೇರಿ ನೀರು ಹಂಚಿಕೆಯ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ವಿಪಕ್ಷ ನಾಯಕರು ಹಾಗೂ ಸಚಿವರು ತಮಿಳುನಾಡಿಗೆ ನೀರು ಹರಿಸದಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ನಾಳೆಯಿಂದ ತಮಿಳುನಾಡಿಗೆ ರೂ.೮,೦೦೦ ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ ನಿತ್ಯ ೧೧ ಸಾವಿರ ಕ್ಯೂಸೆಕ್ ಬದಲು ೮ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತದೆ. ನಾಳೆಯಿಂದ ನಿತ್ಯ ೮೦೦೦ ಕ್ಯೂ ಸೆಟ್ ನೀರು ಬಿಡುಗಡೆ ಮಾಡುತ್ತೇವೆ. ಎಂದು ಅವರು ತಿಳಿಸಿದರು.
ನೀರು ಬಿಡುಗಡೆ ಮಾಡಬಾರದೆಂದು ಜುಲೈ ೧೨ರಂದು ನಿರ್ಧರಿಸಿದ್ದೆವು. ಅಂದೇ ಸರ್ವ ಪಕ್ಷಗಳ ಸಭೆ ಕರೆಯಲು ತೀರ್ಮಾನ ಮಾಡಿದ್ದೆವು. ತಮಿಳುನಾಡಿಗೆ ಈಗ ನೀರು ಬಿಡುಗಡೆ ಬೇಡವೆಂದು ನಿರ್ಧರಿಸಲಾಗಿದೆ ಸಿಡಬ್ಲ್ಯೂಆರ್‌ಸಿ ಶಿಫಾರಸು ವಿರುದ್ಧ ಸಿಡಬ್ಲ್ಯೂಎಂ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಮಳೆ ಕಡಿಮೆಯಾದರೆ ರೂ.೮,೦೦೦ ಕ್ಯೂಸೆಕ್ ಗಿಂತ ಕಡಿಮೆ ಬೀಡುತ್ತೇವೆ. ಒಂದು ವೇಳೆ ಮಳೆ ಹೆಚ್ಚಾದರೆ ಹೆಚ್ಚು ನೀರು ಬಿಡುಗಡೆ ಮಾಡುತ್ತೇವೆ. ಮಳೆ ಹೆಚ್ಚಾದರೆ ಸಿಡಬ್ಲ್ಯೂಆರ್ ಸಿ ಶಿಫಾರಸಿನಂತೆ ನೀರು ರಿಲೀಸ್ ಮಾಡುತ್ತೇವೆ. ಜೊತೆಗೆ ಸಿಡಬ್ಲ್ಯೂಆರ್ ಸಿ ಶಿಫಾರಸು ವಿರುದ್ಧ ಕಾನೂನು ಹೋರಾಟ ಸಹ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸರ್ವ ಪಕ್ಷ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.