Friday, April 18, 2025
Google search engine

Homeರಾಜ್ಯಇಂದು ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ನೀರು ಸಂಬಂಧ ವಿಚಾರಣೆ: ಮಂಡ್ಯದಲ್ಲಿ ಉರುಳು ಸೇವೆ ಪ್ರತಿಭಟನೆ.!

ಇಂದು ಸುಪ್ರೀಂಕೋರ್ಟ್ ನಲ್ಲಿ ಕಾವೇರಿ ನೀರು ಸಂಬಂಧ ವಿಚಾರಣೆ: ಮಂಡ್ಯದಲ್ಲಿ ಉರುಳು ಸೇವೆ ಪ್ರತಿಭಟನೆ.!

ಮಂಡ್ಯ: ಇಂದು ಕಾವೇರಿ ನೀರು ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ಹಿನ್ನೆಲೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ರಾಜ್ಯದ ಪರ ತೀರ್ಪು ಬರಲೆಂದು ಮಂಡ್ಯದಲ್ಲಿ ಉರುಳು ಸೇವೆ ಮಾಡಲಾಗಿದೆ.

ಮಂಡ್ಯದ ಸಂಜಯ ವೃತ್ತದಲ್ಲಿ ಉರುಳು ಸೇವೆ ಮೂಲಕ ಪ್ರತಿಭಟನೆ ನಡೆಸಲಾಗಿದ್ದು, ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿ, ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಾಡ ದೇವತೆ ಚಾಮುಂಡೇಶ್ವರಿ ಪ್ರಾರ್ಥನೆ ಮಾಡಿಕೊಂಡು ಪ್ರತಿಭಟನಾಕಾರರು ಉರುಳು ಸೇವೆ ಮಾಡಿದ್ದಾರೆ.

ಸುಪ್ರೀಂ ತೀರ್ಪಿನತ್ತ ಮಂಡ್ಯ ರೈತರ ಚಿತ್ತ

ಇಂದು ಕಾವೇರಿ ನೀರು ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು, ಮಂಡ್ಯದ ರೈತರ ಬದುಕು ವಿಚಾರಣೆ ಮೇಲೆ ನಿಂತಿದೆ.

ರಾಜ್ಯದ ವಾಸ್ತವ ಸ್ಥಿತಿಯ ಬಗ್ಗೆ ಸಮರ್ಥವಾದ ಮಂಡಿಸುತ್ತಾ ಸರ್ಕಾರ.? ಎಂಬ ಪ್ರಶ್ನೆ ರೈತರಲ್ಲಿದೆ. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ಮತ್ತೆ ರೈತರಿಗೆ ಮರಣ ಶಾಸನವಾಗಲಿದೆ. ಈಗಾಗಲೇ ಮಂಡ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು, ತಮಿಳುನಾಡಿಗೆ ನೀರು ಬಿಡುತ್ತಿರುವುದಕ್ಕೆ ಅನ್ನದಾತರು ಸಿಡಿದೆದ್ದಿದ್ದಾರೆ.

ಸರ್ಕಾರದ ನಡೆಗೆ ತೀವ್ರ ಆಕ್ರೋಶಗೊಂಡಿರುವ ರೈತರು, ಪ್ರಾಧಿಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡುವ ವಿಶ್ವಾಸದಲ್ಲಿದ್ದಾರೆ. ಸುಪ್ರೀಂ ತೀರ್ಪು ಮೇಲೆ ಮಂಡ್ಯ ರೈತರ ಹೋರಾಟದ ಕಿಚ್ಚು ನಿಂತಿದೆ.

RELATED ARTICLES
- Advertisment -
Google search engine

Most Popular