ಮಂಡ್ಯ: ತಮಿಳುನಾಡಿಗೆ ಡ್ಯಾಂ ನಿಂದ ನೀರು ಬಿಟ್ಟ ಹಿನ್ನಲೆ ಮಂಡ್ಯದಲ್ಲಿ ಮತ್ತೆ ರೈತರ ಕಾವೇರಿ ಕಿಚ್ಚು ಭುಗಿಲೆದ್ದಿದ್ದು, ಶ್ರೀರಂಗಪಟ್ಟಣದಲ್ಲಿ ಮೈ- ಬೆಂ ಹೆದ್ದಾರಿ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪಟ್ಟಣದ ಕುವೆಂಪು ವೃತ್ತದ ಬಳಿ ಮೈ- ಬೆಂ ಹೆದ್ದಾರಿ ತಡೆದು ರೈತರು ಅಸಮಧಾನ ಹೊರಹಾಕಿದ್ದಾರೆ.
ನೀರು ಬಿಡಲು ಆದೇಶ ನೀಡಿದ ಪ್ರಾಧಿಕಾರ ಮತ್ತು ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಸಂಘದ ಹೋರಾಟಕ್ಕೆ ಹಲವು ಸಂಘಟನೆಗಳ ಸಾಥ್ ನೀಡಿವೆ.