Friday, April 18, 2025
Google search engine

Homeರಾಜ್ಯಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆಗಳು ಫೆ.15ರಿಂದ ಆರಂಭ

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆಗಳು ಫೆ.15ರಿಂದ ಆರಂಭ

ನವದೆಹಲಿ: 2025ರ ಫೆಬ್ರವರಿ 15ರಿಂದ 10 ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಆರಂಭವಾಗಲಿವೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಬುಧವಾರ ಘೋಷಿಸಿದೆ.

ಮಧ್ಯರಾತ್ರಿಯ ಬಳಿಕ ಹೊರಬಂದ ಪರೀಕ್ಷಾ ಅಧಿಸೂಚನೆಯಲ್ಲಿ, 10ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಮಾರ್ಚ್‌ 18ರಂದು ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಏಪ್ರಿಲ್ 4,ರಂದು ಕೊನೆಗೊಳ್ಳಲಿವೆ ಎಂದು ತಿಳಿಸಿದೆ.

ಇದೇ ಮೊದಲ ಬಾರಿಗೆ ಮಂಡಳಿಯು ಕನಿಷ್ಠ 86 ದಿನಗಳಿಗೆ ಮುಂಚಿತವಾಗಿ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. “ಎರಡು ವಿಷಯಗಳ ಮಧ್ಯೆ ಬೇಕಾಗುವಷ್ಟು ಅವಕಾಶ ನೀಡಲಾಗಿದೆ. ವಿದ್ಯಾರ್ಥಿ ತೆಗೆದುಕೊಳ್ಳುವ ಎರಡು ವಿಷಯಗಳು ಒಂದೇ ತಾರೀಖಿನಂದು ಬರದೇ ಇರುವಂತೆ ಗಮನದಲ್ಲಿಟ್ಟುಕೊಂಡು, ಕನಿಷ್ಠ 40,000 ವಿಷಯಗಳ ಸಂಯೋಜನೆಯನ್ನು ರಚಿಸಿ ಡೇಟಾಶೀಟ್ (ವೇಳಾಪಟ್ಟಿ) ಸಿದ್ಧಪಡಿಸಲಾಗಿದೆ” ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಾನ್ಯಮ್ ಭಾರಧ್ವಾಜ್ ತಿಳಿಸಿದ್ದಾರೆ.

ಪರೀಕ್ಷೆ ನಡೆಯುವುದಕ್ಕೆ ಸಾಕಷ್ಟು ಮುಂಚಿತವಾಗಿ ವೇಳಾಪಟ್ಟಿ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶಗಳನ್ನು ಸ್ಪಷ್ಟಪಡಿಸಿರುವ ಸಿಬಿಎಸ್‌ಇ, “ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬೇಗನೆ ತಯಾರಿ ಆರಂಭಿಸಬಹುದು. ಪರೀಕ್ಷಾ ಒತ್ತಡವನ್ನು ದೂರ ಮಾಡಿಕೊಂಡು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಲು ಅನುವಾಗುತ್ತದೆ.

ಪೋಷಕರು ಮತ್ತು ಶಿಕ್ಷಕರು ಕೂಡಾ ತಮ್ಮ ವೇಳಾಪಟ್ಟಿಯನ್ನು ಯೋಜಿಸಬಹುದು. ಅದೇ ರೀತಿ ಬೇಸಿಗೆ ರಜೆಗಳು ಮತ್ತು ಮೌಲ್ಯಮಾಪನ ಕೆಲಸಗಳನ್ನು ಮಂಡಳಿಯೇತರ ತರಗತಿಗಳ ಅಧ್ಯಯನಕ್ಕೆ ಅಡ್ಡಿಯಾಗದಂತೆ ನಿರ್ವಹಿಸಬಹುದು. ಪರೀಕ್ಷಾ ಕೇಂದ್ರಗಳಾಗಿರುವ ಶಾಲೆಗಳು ಕೂಡಾ ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಯೋಜನೆ ರೂಪಿಸಿಕೊಳ್ಳಲು ನೆರವಾಗುತ್ತದೆ” ಎಂದು ತಿಳಿಸಿದೆ.

RELATED ARTICLES
- Advertisment -
Google search engine

Most Popular