ನವದೆಹಲಿ: ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಈ ಬಾರಿ ಶೇ.93.66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷದ ಶೇ.93.60 ಫಲಿತಾಂಶಕ್ಕೆ ಹೋಲಿಸಿದರೆ 0.06ರಷ್ಟು ಹೆಚ್ಚು ಉತ್ತಮ ಫಲಿತಾಂಶ ದಾಖಲಾಗಿದೆ.
ವಿದ್ಯಾರ್ಥಿನಿಯರು ಶೇ.95ರಷ್ಟು ಪಾಸಾಗಿ ಮೇಲುಗೈ ಸಾಧಿಸಿದ್ದು, ವಿದ್ಯಾರ್ಥಿಗಳು ಶೇ.92.63ರಷ್ಟು ಉತ್ತೀರ್ಣರಾಗಿದ್ದಾರೆ. ದೇಶಾದ್ಯಂತ ಮತ್ತು ವಿದೇಶದ ಕೆಲ ಸ್ಥಳಗಳಲ್ಲಿ ಫೆಬ್ರವರಿ 15ರಿಂದ ಮಾರ್ಚ್ 18ರ ವರೆಗೆ ಪರೀಕ್ಷೆ ನಡೆದಿದ್ದು, 23.7 ಲಕ್ಷ ಮಂದಿ ವಿದ್ಯಾರ್ಥಿಗಳಲ್ಲಿ 22.2 ಲಕ್ಷ ಮಂದಿ ಉತ್ತೀರ್ಣರಾಗಿದ್ದಾರೆ.
ತ್ರಿವೆಂಡ್ರಂ ಮೊದಲ ಸ್ಥಾನದಲ್ಲಿದ್ದು, ವಿಜಯವಾಡ, ಬೆಂಗಳೂರು, ಚೆನ್ನೈ ಹಾಗೂ ಪುಣೆ ಮುಂದಿನ ಸ್ಥಾನಗಳಲ್ಲಿವೆ. ಬೆಂಗಳೂರು ಶೇ.91.64 ಫಲಿತಾಂಶ ದಾಖಲಿಸಿದ್ದು, ಬಾಲಕಿಯರು ಶೇ.85.70 ಪಾಸಾಗಿ ಮೇಲುಗೈ ಸಾಧಿಸಿದ್ದಾರೆ.