ಮೈಸೂರು : ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ೪೦ ಲಕ್ಷ ರೂ ಮೌಲ್ಯದ ೮೫ ಕೆಜಿ ೭೩೦ ಗ್ರಾಂ ಗಾಂಜಾ ವಶಪಡಿಸಿಕೊಂಡು ಇಬ್ಬರು ಪೆಡ್ಲರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಸಾತಗಳ್ಳಿ ೧ನೇ ಹಂತದಲ್ಲಿ ಒಂದು ಬೊಲೆರೋ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ವಾಹನದಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಸಾಗಾಣಿಕೆಗೆ ಬಳಸಿದ್ದ ಬೊಲೆರೋ ವಾಹನ ಹಾಗೂ ಮೊಬೈಲ್ಪೋ ನ್‌ಗಳನ್ನು ಸಹ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಮೈಸೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾವನ್ನು ಒರಿಸ್ಸಾ ರಾಜ್ಯದಿಂದ ರೈಲಿನಲ್ಲಿ ತಂದು ಮೈಸೂರುನಲ್ಲಿ ಚಿಲ್ಲರೆ ಮಾರಾಟ ಮಾಡಲು ಬಂದಿದ್ದಾಗಿ ತಿಳಿದು ಬಂದಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಡಿಸಿಪಿ ಎಸ್.ಜಾಹ್ನವಿ, ಎಸಿಪಿ ಎಸ್.ಎನ್. ಸಂದೇಶ್
ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಮೋಹನ್ ಕುಮಾರ್, ಪಿ.ಎಸ್.ಐ. ಗಳಾದ ಮಾರುತಿ ಅಂತರಗಟ್ಟಿ, ಕಿರಣ್ ಎ. ಹಂಪಿಹೋಳಿ, ಎ.ಎಸ್.ಐ ಅಸ್ಗರ್‌ಖಾನ್ ಹಾಗೂ ಸಿಬ್ಬಂದಿಗಳಾದ ಸಲೀಂಪಾಷ, ರಾಮಸ್ವಾಮಿ, ಪಿ.ಎನ್ ಲಕ್ಷ್ಮೀಕಾಂತ, ಎ. ಉಮಾಮಹೇಶ್, ಟಿ. ಪ್ರಕಾಶ್, ಎಂ.ಆರ್ ಗಣೇಶ್, ಮಹೇಶ್ ಆರ್, ಆರ್. ಸುರೇಶ್, ಚಂದ್ರಶೇಖರ್, ನರಸಿಂಹ, ಗೋವಿಂದ, ಮೋಹನಾರಾಧ್ಯ, ಮಹೇಶ್.ಕೆ, ಮಧುಸೂಧನ್, ಶಿವಣ್ಣ, ರಮ್ಯ, ಮಮತ ಅವರು ಆಳಿಯಲ್ಲಿ ಪಾಲ್ಗೊಂಡಿದ್ದು, ನಗರದ ಪೊಲೀಸ್ ಆಯುಕ್ತರಾದ ಬಿ. ರಮೇಶ್
ದಾಳಿಯನ್ನು ಪ್ರಶಂಸಿಸಿರುತ್ತಾರೆ.