ಮೈಸೂರು : ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಕೇಶ್ ಪಾಪಣ್ಣರವರ ಹುಟ್ಟುಹಬ್ಬವನ್ನು ವಿವಿಧ ಸೇವಾಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಚರಿಸಲಾಯಿತು ಎಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹೊನ್ನಪ್ಪ ತಿಳಿಸಿದರು. ವಿಜಯನಗರ ೪ನೇ ಹಂತದಲ್ಲಿರುವ ಸೇವಾಯಾನ ಟ್ರಸ್ಟ್‌ನ ವೃದ್ಧಾಶ್ರಮದಲ್ಲಿ ಮಹಿಳೆಯರಿಗೆ ಹಣ್ಣುಗಳನ್ನು ವಿತರಿಸಿ ಮಾಡಿದ ಅವರು, ರಾಕೇಶ್ ಪಾಪಣ್ಣ ಹಿನಕಲ್ ಗ್ರಾಮದ ಹೆಮ್ಮೆಯ ಪುತ್ರರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅಪ್ಪಟ ಅಭಿಮಾನಿಯಾಗಿದ್ದಾರೆ. ರಾಕೇಶ್ ಪಾಪಣ್ಣ ರವರ ಅಭಿಮಾನಿ ಪಡೆದ ಜಿಲ್ಲೆಯಾದ್ಯಂತ ಇದ್ದು, ಯುವಕರು ಅವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
ಅವರ ಹುಟ್ಟುಹಬ್ಬವನ್ನು ಮೈಸೂರು ನಗರ, ಮೈಸೂರು ತಾಲ್ಲೂಕು, ಹುಣಸೂರು ತಾಲ್ಲೂಕು, ಹಿನಕಲ್‌ನ ಎಲ್ಲಾ ಕೋಮಿನ ಯುವಕರು ವಿವಿಧ ಸೇವಾಕಾರ್ಯಕ್ರಮಗಳನ್ನು ಮಾಡಿ ರಾಕೇಶ್ ಪಾಪಣ್ಣ ಅವರನ್ನು ಅಭಿನಂದಿಸಿದ್ದಾರೆ ಎಂದ ಅವರು, ಚಾಮುಂಡೇಶ್ವರಿ ತಾಯಿ ಅವರಿಗೆ ಆಯುಷ್ಯ, ಆರೋಗ್ಯ, ಕರುಣಿಸುವುದರೊಂದಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಶ್ರೀನಿವಾಸ್‌ರಾಮೇಗೌಡ, ದಿನೇಶ್, ಕೆ.ಜಿ. ನಾಗರಾಜ್, ರಮೇಶ್ ಹೊಟ್ಟೇಗೌಡ, ಸೇವಾಯಾನ ಟ್ರಸ್ಟ್‌ನ ಸಂಧ್ಯಾ ಹಾಜರಿದ್ದರು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮಕ್ಕೆ ೧ ದಿನದ ಊಟದ ವೆಚ್ಚವನ್ನು ನೀಡಲಾಯಿತು.